ಸಮಾನತೆಗೆ ನಾಂದಿ ಹಾಡಿದ ಮಹಾನ್ ಚೇತನ

IMG-20250430-WA0381
ಸಾಲಿಗ್ರಾಮದಲ್ಲಿ ಬಸವಣ್ಣ ಜಯಂತಿ ಕಾರ್ಯಕ್ರಮವನ್ನು ಶಾಸಕ ರವಿಶಂಕರ್ ಗುರುವಾರ ಉದ್ಘಾಟಿಸಿದರು. ನಟರಾಜ್, ಸಿ.ಪಿ.ರಮೇಶ್, ಉದಯಶಂಕರ್, ಪ್ರಭಾಕರ್, ಕೃಷ್ಣರಾಜ, ಕೃಷ್ಣಪ್ಪ, ಶಂಕರಮೂರ್ತಿ ಹೇಮಂತ್, ಚಂದು ಇತರರಿದ್ದರು.
Published on

ಸಾಲಿಗ್ರಾಮ: 12ನೇ ಶತಮಾನದಲ್ಲೇ ಬಸವಣ್ಣನವರು ಅಸ್ಪಶ್ಯತೆ ಹೋಗಲಾಡಿಸಿ ಸಮಾನತೆಗೆ ನಾಂದಿ ಹಾಡಿದ ಮಹಾನ್ ನಾಯಕ ಬಸವಣ್ಣನವರು ಎಂದು ಎಂದು ಶಾಸಕ ಡಿ.ರವಿಶಂಕರ್ ಬಣ್ಣಿಸಿದರು.

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಅವರು ಸೇರಿದಂತೆ ಇನ್ನಿತರ ಮಹಾನ್ ನಾಯಕರು ಮತ್ತು ವಚನಗಾರರು ಕೊಟ್ಟಿರುವ ಆದರ್ಶ ಮತ್ತು ಸಂದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸರ್ವಧರ್ಮ, ಸರ್ವ ಜನರ ಸಮಾನತೆ ಜೀವನ ನಡೆಸಲು ಉತ್ತಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಇಂತಹ ಒಳ್ಳೆಯ ಕೆಲಸವನ್ನು ಒಗ್ಗಟ್ಟಿನಿಂದ ಮಾಡೋಣ ಎಂದರು.

ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ನಾವೆಲ್ಲರೂ ಸರ್ವ ಜನರ ಸಹಕಾರ ಪಡೆದು ಮಹನೀಯರು ಹಾಕಿರುವ ಹಾದಿಯಲ್ಲಿ ಸಾಗೋಣ. ಪ್ರಜಾಪ್ರಭುತ್ವದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಿಕೊಳ್ಳುವ ಮೂಲಕ ಮಹನೀಯರ ಕನಸುಗಳನ್ನು ನನಸು ಮಾಡಲು ಮುಂದಾಗಿ ಎಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಮಹನೀಯರ ಜಯಂತಿಯನ್ನು ಸಮುದಾಯ ಭವನ ಅಥವಾ ಶಾಲಾ ಆವರಣ ಸೇರಿದಂತೆ ವಿಶಾಲವಾದ ಸ್ಥಳಗಳಲ್ಲಿ ಆಚರಣೆ ಮಾಡಲು ತಹಸಿಲ್ದಾರ್ ಅವರಿಗೆ ಶಾಸಕ ಡಿ.ರವಿಶಂಕರ್ ಸೂಚಿಸಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅವಕಾಶಗಳನ್ನ ಕಲ್ಪಿಸಿಕೊಟ್ಟಿದ್ದಾರೆ. ಇದನ್ನು ಸಮಾಜದ ಮುಖಂಡರು ಸದುಪಯೋಗಪಡಿಸಿಕೊಳ್ಳಿ. ಬಸವಣ್ಣ ಅವರ ಆದರ್ಶಗಳನ್ನ ಪಾಲನೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಬಸವಣ್ಣ ಅವರ ಆದರ್ಶ ಗುಣಗಳು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನ ಜನತಂತ್ರದ ಉತ್ತಮ ವ್ಯವಸ್ಥೆಗೆ ಅಡಿಗಲ್ಲಾಗಿದೆ ಎಂದು ತಿಳಿಸಿದರು.

ಹರದನಹಳ್ಳಿ ವಿಎಸ್‌ಎಸ್ ನಿರ್ದೇಶಕ ನಟರಾಜ್, ಎಲೆಮುದ್ದನಹಳ್ಳಿ ನಿವೃತ್ತ ಶಿಕ್ಷಕ ಲಿಂಗಪ್ಪ, ಕಂದಾಯ ಇಲಾಖೆಯ ಅಧಿಕಾರಿ ನರಗುಂದ, ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಕುರಿತು ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಪೊಲೀಸ್ ಇನ್‌ಸ್ಪೆಕ್ಟರ್ ಕೃಷ್ಣರಾಜ, ಬಿಇಒ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಂಕರಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯ ಹೇಮಂತ್, ತಾಪಂ ಮಾಜಿ ಅಧ್ಯಕ್ಷ ಚಂದು, ಮಂಜಪ್ಪ, ಸಣ್ಣಪ್ಪ, ತಂದ್ರೆ ಧರ್ಮ, ಡಿಎಎಸ್‌ಎಸ್ ಚಂದ್ರು, ಬಲರಾಮ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶೌಕತ್, ಕೊತ್ವಾಲ್ ಮಂಜು, ಗ್ಯಾರಂಟಿ ಸಮಿತಿ ಸದಸ್ಯ ವಾಸಿಮ್, ಗ್ರಾಪಂ ಮಾಜಿ ಉಪಾಧ್ಯಕ್ಷ ಡಿ.ದೇವರಾಜ್, ಮುತ್ತಾರ್ ಪಾಷ, ವೆಂಕಟೇಶ್ ಗುಣಪಾಲ್, ಜವರಯ್ಯ ,ಕಂದಾಯ ಇಲಾಖೆ ಶಶಿಕಾಂತ್, ಶಂಕರ್, ದೇವೇಂದ್ರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net