

ನವದೆಹಲಿ: ತೀವ್ರ ಅಸ್ವಸ್ಥಗೊಂಡಿರುವ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಲಿಕ್ವಿಡ್ ಆಕ್ಸಿಜನ್ಗೆ ಗರಿಷ್ಠ ಮಾರಾಟ ದರ ನಿಗದಿ ಮಾಡಿ ಕೇಂದ್ರ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಕರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಆಕ್ಸಿಜನ್ ಸಿಲಿಂಡರ್ಗಳ ಬೇಡಿಕೆ ಹೆಚ್ಚಾಗಿದೆ. ಕೆಲ ಏಜೆನ್ಸಿಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದು, ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಉತ್ಪಾದಕರಿಗೆ ಪ್ರತಿ ಘನ ಲೀಟರ್ಗೆ 15.22 ರೂಪಾಯಿಯನ್ನು ನಿಗದಿಸಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪ್ರತಿ ಘನ ಲೀಟರ್ಗೆ 25.71 ರೂಪಾಯಿ ನಿಗದಿ ಮಾಡಲಾಗಿದೆ. ಈ ಬೆಲೆಯು ಆರು ತಿಂಗಳಿಗೆ ಅನ್ವಯವಾಗಲಿದೆ. ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಬೆಲೆ ನಿಗದಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಲೂಸ್ ಸ್ವೀಟ್ಗೂ ಟೈಟ್ ರೂಲ್ಸ್.. ಇದು ಸ್ವೀಟ್ ಅಂಗಡಿಯವರಿಗೆ ಸಿಹಿ ಸುದ್ದಿನಾ? ಶೇ. 82ಕ್ಕೇರಿದ ಗುಣಮುಖ ಪ್ರಮಾಣ: ದೇಶದಲ್ಲಿ ಶುಕ್ರವಾರ 93 ಸಾವಿರ ಜನರು ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ ಚೇತರಿಸಿಕೊಂಡವರ ಸಂಖ್ಯೆ 48.5 ಲಕ್ಷಕ್ಕೆ ಏರಿಕೆಯಾಗಿದೆ.
ಕರೊನಾ ಸೋಂಕಿಗೆ ಔಷಧ ಲಭ್ಯವಾಗುವುದರೊಳಗೆ ವಿಶ್ವದಲ್ಲಿ 20 ಲಕ್ಷದಷ್ಟು ಜನರು ಮೃತರಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂದಿನ ವರ್ಷದ ಅಂತ್ಯದೊಳಗೆ ಕರೊನಾ ಔಷಧ ಸಿದ್ಧವಿರುವ ಸಾಧ್ಯತೆಯಿದ್ದು, ಭಾರತ ಸರ್ಕಾರಕ್ಕೆ ಕನಿಷ್ಠ 80 ಸಾವಿರ ಕೋಟಿ ರೂ. ಔಷಧ ಖರೀದಿಗೆ ಬೇಕಾಗಲಿದೆ ಎಂದು ಸೆರಂ ಇನ್ಸ್ಟಿಟ್ಯೂಟ್ನ ಆದರ್ ಪೂನಾವಾಲಾ ಹೇಳಿದ್ದಾರೆ. ಔಷಧ ಸಂಗ್ರಹಣೆ, ವಿತರಣೆ ಬಗ್ಗೆ ಯೋಜನೆ ಮತ್ತು ಮಾರ್ಗದರ್ಶನದ ಅವಶ್ಯಕತೆಯಿದೆ ಎಂದಿದ್ದಾರೆ.