ದಿ ಗೋಲ್ಡನ್ ಚಾರಿಯೇಟ್' ರೈಲು ಪುನಾರಂಭ

Golden Chariot
Published on

ಬೆಂಗಳೂರು: ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ದಿ ಗೋಲ್ಡನ್ ಚಾರಿಯೇಟ್ ರೈಲನ್ನು ಪುನಾರಂಭಿಸಲಾಗಿದ್ದು, ಡಿಸೆಂಬರ್ 21 ರಂದು ಬೆಳಿಗ್ಗೆ 9.30 ಗಂಟೆಗೆ ಯಶವಂತಪುರ ರೈಲು ನಿಲ್ಯಾಣದ ಪ್ಲಾಟ್ ಫಾರ್ಮ್ 6 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಿರುವರು.

‘ದಿ ಗೋಲ್ಡನ್ ಚಾರಿಯೇಟ್' ರೈಲನ್ನು ಐಆರ್‍ಸಿಟಿಸಿ ಅವರು ನಿರ್ವಹಣೆ ಮಾಡುತ್ತಿದ್ದು, ಪ್ರಸ್ತುತ 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರವಾಸ ಕಾರ್ಯಕ್ರಮಗಳು ಹೆಚ್ಚಿರುವುದರಿಂದ ಕರ್ನಾಟಕ ರಾಜ್ಯದ ಪ್ರವಾಸಿ ತಾಣಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದು ಸೂಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ‘ದಿ ಗೋಲ್ಡನ್ ಚಾರಿಯೇಟ್' ರೈಲನ್ನು ಪುನಾರಂಭಿಸಲಾಗಿದೆ.

ಇದೇ ಡಿಸೆಂಬರ್ 21 ರಿಂದ ‘ದಿ ಗೋಲ್ಡನ್ ಚಾರಿಯೇಟ್' ರೈಲು ಬೆಂಗಳೂರಿನಿಂದ ಹೊರಟು, ಮೈಸೂರು - ಕಾಂಚಿಪುರಂ - ಮಹಾಬಲಿಪುರಂ - ತಂಜಾವುರ್ - ಚೆಟ್ಟಿನಾಡು - ಕೊಚ್ಚಿನ್ - ಚೆÀರ್ತಲ/ಮರೈಕುಲಮ್ - ಬೆಂಗಳೂರು ಮಾರ್ಗವಾಗಿ ಸಂಚಾರ ಪ್ರಾರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net