ಮಾಲೀಕನ ಸಾವಿಗೆ ಮೇಕೆಯ ಮೂಕ ರೋದನ; ಅಂತ್ಯಕ್ರಿಯೆಗಾಗಿ ಸ್ಮಶಾನದವರೆಗೂ ನಡೆದು ಬಂತು ಈ ಪ್ರಾಣಿ

Goat 18 Feb 20
Published on

ರಾಯಚೂರು: ಪ್ರಾಣಿಗಳನ್ನು ಪ್ರೀತಿಸಿದರೆ ಅವು ಕೂಡ ತಿರುಗಿ ಅಷ್ಟೇ ನಿಷ್ಕಲ್ಮಶ ಪ್ರೀತಿಯನ್ನು ಮನುಷ್ಯರಿಗೆ ಕೊಡುತ್ತವೆ ಎಂಬುದು ಹಲವು ಬಾರಿ ಸಾಬೀತಾಗಿರುವ ಸಂಗತಿ.

ಈಗ ಮೇಕೆಯೊಂದು ತನ್ನ ಮಾಲೀಕನ ಮೇಲಿರುವ ಪ್ರೀತಿಯನ್ನು ತೋರಿಸಿದೆ. ಮೂಕಪ್ರಾಣಿಯ ನಡೆ ಜನರಲ್ಲಿ ಅಚ್ಚರಿ ಮೂಡಿಸಿದೆ.

ಮಾನ್ವಿ ತಾಲೂಕಿನ ಮರಕಲದಿನ್ನೆ ಗ್ರಾಮದ ಅಮರಪ್ಪ ಕುರುಬರು (48) ಜಮೀನಿನಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದರು.ಅಂತ್ಯಕ್ರಿಯೆ ನಡೆಸಲು ಅವರ ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಗಿತ್ತು.

ಈ ವೇಳೆ ಅವರು ಸಾಕಿದ್ದ ಮೇಕೆ ಮೂಕವಾಗಿ ರೋದಿಸಿದೆ. ಅಮರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜನರೊಟ್ಟಿಗೆ ತಾನೂ ಸ್ಮಶಾನಕ್ಕೆ ಬಂದಿದೆ.

ಅಮರಪ್ಪ ಅವರ ಪ್ರೀತಿಯ ಮೇಕೆಯಾಗಿದ್ದ ಇದು ಅವರ ಅಂತ್ಯಕ್ರಿಯೆ ಮುಗಿಯವವರೆಗೂ ಸ್ಮಶಾನ ಬಿಟ್ಟು ಕದಲಿಲ್ಲ. ಇದನ್ನು ನೋಡಿದ ಅಲ್ಲಿನ ಜನರು ಅಚ್ಚರಿಯೊಂದಿಗೆ, ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net