ಶಿಬಿರದಲ್ಲಿ ಸಮಗ್ರ ತಜ್ಞ ವೈದ್ಯರ ತಂಡವು 400ಕ್ಕೂ ಹೆಚ್ಚು ಜನರಿಗೆ ತಪಾಸಣೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್, ಜಿ.ಪಂ.ಉಪಾಧ್ಯಕ್ಷೆ ಸಿ.ಲತಾ, ಸದಸ್ಯ ಜಮೀಲ್ ಪಾಷ, ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಸೌಮ್ಯಶ್ರೀ, ಶಿಶು ಅಭಿವೃದ್ಧಿ ಅಧಿಕಾರಿ ನಂಜಮಣಿ, ಮುಖಂಡರು ಕುಂತೂರು ಗೋಪಾಲ್, ತೇಜುಕುಮಾರ್ ಶ್ಯಾಮು, ರಾಜಣ್ಣ, ಎಂ. ಶಿವಕುಮಾರ್, ನಾಗಸಿದ್ದಯ್ಯ, ಬಾಬು, ಅಮರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.