ವಿಜೃಂಭಣೆಯ ಅನ್ನಪೂಣೇಶ್ವರಿ ರಥೋತ್ಸವ

ಚನ್ನರಾಯಪಟ್ಟಣ ತಾಲೂಕಿನ ಕಲ್ಲೆನಹಳ್ಳಿ ಒಳನಾಡು ಅನ್ನಪೂಣೇಶ್ವರಿ ದೇವಿಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಷಾಢ ಮಾಸದ ಕಡೇ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಚನ್ನರಾಯಪಟ್ಟಣ ತಾಲೂಕಿನ ಕಲ್ಲೆನಹಳ್ಳಿ ಒಳನಾಡು ಅನ್ನಪೂಣೇಶ್ವರಿ ದೇವಿಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಷಾಢ ಮಾಸದ ಕಡೇ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
Published on

ಚನ್ನರಾಯಪಟ್ಟಣ: ತಾಲೂಕಿನ ಕಲ್ಲೆನಹಳ್ಳಿ ಒಳನಾಡು ಅನ್ನಪೂಣೇಶ್ವರಿದೇವಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಷಾಢ ಮಾಸದ ಕಡೇ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ನಿಸರ್ಗರಮಣೀಯ ತಾಣದಲ್ಲಿ ನೆಲೆಸಿರುವ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ರಥೋತ್ಸವದ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ದೇವಾಲಯದಲ್ಲಿ ಮಂಗಳವಾದ್ಯ ಸಹಿತವಾಗಿ ಸುಪ್ರಭಾತ, ಮಹಾಭಿಷೇಕ, ರಥಸಂಪ್ರೋಕ್ಷಣೆ, ಪರಿವಾರ ದೇವತೆಗಳ ಸಮೇತ ಆದಿಶಕ್ಷಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಮೂಲಮಂತ್ರ ಹೋಮ, ಪೂರ್ಣಾಹುತಿ, ಸುವಾಸಿನಿಯರಿಂದ ಸಹಸ್ರನಾಮ ಪಾರಾಯಣ ಬಳಿಕ ಆರ್ಚನೆಯೊಂದಿಗೆ ಆರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ವಿಶೇಷವಾಗಿ ಅಂಕೃತಗೊಂಡಿದ್ದ ದೇವಿ ಉತ್ಸವ ಮೂರ್ತಿಯನ್ನು ಛತ್ರಿ ಚಾಮರದೊಂದಿಗೆ ತರಲಾಯಿತು. ನಂತರ ಅಲಂಕೃತ ರಥದಲ್ಲಿ ಸ್ಥಾಪಿಸಿ ಮಹಾಮಂಗಳಾರತಿ ನಂತರ ಭಕ್ತರು ರಥವನ್ನು ಎಳೆಯಲಾಯಿತು.

ಭಕ್ತರು ದೇವರಿಗೆ ಫಲ, ಪುಷ್ಪಾದಿ ಅರ್ಚನೆ ಮಾಡುವ ಜತೆಗೆ ತಾವು ತಂದಿದ್ದ ಬಾಳೆಹಣ್ಣು, ಹೂವನ್ನು ರಥಕ್ಕೆ ತೋರಿದರು. ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು ಕೆಲವು ಭಕ್ತರು ಹರಕೆ ಒಪ್ಪಿಸಿದರು. ಮಂಗಳವಾದ್ಯ ಚಾಮನ ಕುಣಿತ ಪ್ರದರ್ಶನ ರಥೋತ್ಸವಕ್ಕೆ ಮೆರುಗು ನೀಡಿತು. ಪ್ರಧಾನ ಅರ್ಚಕರಾದ ಎಸ್, ವೇದಮೂರ್ತಿ, ಎಸ್. ಸುದರ್ಶನಶರ್ಮ ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆ, ಮಂಗಳ ದ್ರವ್ಯ ವಿತರಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಮಾಸದ ಕಡೇ ಶುಕ್ರವಾರ ಅಭಿಜಿನ್ ಮಹೂರ್ತದಲ್ಲಿ ಬ್ರಹ್ಮರಥೋತ್ಸವ ನೆರವೇರಿತು. ಆಷಾಢ ಮಾಸದ ಪ್ರತಿ ಶುಕ್ರವಾರ ನಡೆಯುವ ವಿಶೇಷ ಪೂಜೆಗೆ ಜಿಲ್ಲೆಯ ವಿವಿಧ ಭಾಗದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಅನ್ನಪೂರ್ಣೆಶ್ವರಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net