ಇನ್ನು ಆರು ತಿಂಗಳು ಕಳೆದರೆ ಪ್ರಧಾನಿ ಮೋದಿಯವರಿಗೆ ಮನೆಯಿಂದ ಹೊರ ಬರಲು ಸಾಧ್ಯವಾಗುವುದಿಲ್ಲ...ಏಕೆಂದರೆ ಈ ದೇಶದ ಯುವಕರು...; ರಾಗಾ ಹೊಸ ವಿವಾದ

Rahul Gandhi
Published on

ನವದೆಹಲಿ: ಆರ್ಥಿಕತೆ, ನಿರುದ್ಯೋಗಗಳಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಸದಾ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ನಿನ್ನೆ ದೆಹಲಿಯ ಚುನಾವಣಾ ಪ್ರಚಾರದಲ್ಲಿ ತುಸು ಜಾಸ್ತಿ ಎನ್ನಿಸುವಷ್ಟು ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಯುವಜನರು ಕೆಲಸವಿಲ್ಲದೆ ಕಂಗಾಲಾಗುತ್ತಿದ್ದಾರೆ. ಹೀಗೆ ಆದರೆ ಆ ಯುವಜನರೇ ಬಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋಲಿನಿಂದ ಹೊಡೆಯುತ್ತಾರೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಈಗ ಎಲ್ಲ ಕಡೆ ಹೋಗಿ ಭಾಷಣ ಮಾಡುತ್ತಿದ್ದಾರೆ. ಆದರೆ ಇನ್ನೊಂದು ಆರು ತಿಂಗಳು ಕಳೆಯಲಿ. ಅವರಿಗೆ ಮನೆಯಿಂದ ಹೊರಗೆ ಬರಲೂ ಸಾಧ್ಯವಾಗುವುದಿಲ್ಲ.

ಹೊರಗೆ ಬಂದರೆ ದೇಶದ ಯುವಕರೇ ಅವರಿಗೆ ಹೊಡೆಯುತ್ತಾರೆ. ಅಷ್ಟೇ ಅಲ್ಲ ಯುವಕರಿಗೆ ಕೆಲಸ ಕೊಡದ ವಿನಃ ಈ ದೇಶ ಅಭಿವೃದ್ಧಿ ಹೊಂದುವುದಿಲ್ಲ ಎಂಬುದನ್ನು ಪ್ರಧಾನಿಗೆ ಅರ್ಥ ಮಾಡಿಸುತ್ತಾರೆ ಎಂದು ಹೇಳಿದ್ದಾರೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟದಲ್ಲಿ ಇದೆ. ಆದರೆ ಈ ಬಾರಿಯ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅದರ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ನರೇಂದ್ರ ಮೋದಿಯವರಂತೂ ಮಾತೇ ಆಡುತ್ತಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net