ಅಸ್ಸಾಂನಲ್ಲಿ ಮುಂದುವರಿದ ಪ್ರವಾಹ, ಸಾವಿನ ಸಂಖ್ಯೆ 82ಕ್ಕೇರಿಕೆ

Assam flood
Published on

ಗುವಾಹಟಿ: ಕಳೆದೆರಡು ವಾರದಿಂದ ನಿರಂತರ ನೀರಿನಲ್ಲಿ ಮುಳುಗಿರುವ ಅಸ್ಸಾಂನಲ್ಲಿ ಪ್ರವಾಹ ಮತ್ತಷ್ಟು ಭೀಕರತೆ ಪಡೆದುಕೊಂಡಿದೆ.

34 ಜಿಲ್ಲೆಗಳು ಸಂಪೂರ್ಣ ಜಲಾವೃತಗೊಂಡಿದ್ದು, 41 ಲಕ್ಷ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಈ ನಡುವೆ ಪರಿಸ್ಥಿತಿ ಕುರಿತು ಗೃಹ ಸಚಿವ ಅಮಿತ್​ ಶಾ ದೂರವಾಣಿ ಕರೆ ಮೂಲಕ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್​ ಅವರಿಂದ ಮಾಹಿತಿ ಪಡೆದಿದ್ದಾರೆ.

ಇದರೊಂದಿಗೆ ಮೇಘಾಲಯ ಮುಖ್ಯಮಂತ್ರಿ ಕೊನಾರ್ಡ್​​ ಸಂಗ್ಮಾ ಅವರೊಂದಿಗೂ ಚರ್ಚಿಸಿದ್ದು, ಕೇಂದ್ರದಿಂದ ಇನ್ನಷ್ಟು ನೆರವು ನೀಡುವ ಭರವಸೆ ನೀಡಿದ್ದಾರೆ.

ಮೇಘಾಲಯದಲ್ಲಿ ಸಿಲುಕಿದ್ದ 12 ಲಕ್ಷ ಜನರನ್ನು ಸಹ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದ್ದು, ಸದ್ಯಕ್ಕೆ ಪ್ರವಾಹ ಮತ್ತಷ್ಟು ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net