ರಾಮನಗರದಲ್ಲಿ ಕರೊನಾದಿಂದ ಮೊದಲ ಸಾವು; ಎದೆನೋವೆಂದು ಆಸ್ಪತ್ರೆ ಸೇರಿದ್ದ ತರಕಾರಿ ವ್ಯಾಪಾರಿ

covid-19
Published on

ರಾಮನಗರ: ಜಿಲ್ಲೆಯಲ್ಲಿ ಕೊವಿಡ್​-19ಗೆ ಮೊದಲ ಬಲಿಯಾಗಿದೆ. 45 ವರ್ಷದ ತರಕಾರಿ ವ್ಯಾಪಾರಿಯೋರ್ವ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಬಿಡದಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಇವರಿಗೆ ಮೊದಲು ಎದೆನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಬೆಂಗಳೂರಿನ ಬೋರಿಂಗ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಇವರಿಗೆ ಮೊದಲು ಕೊವಿಡ್​-19 ಟೆಸ್ಟ್ ಮಾಡಿರಲಿಲ್ಲ. ಮೃತಪಟ್ಟ ಬಳಿಕ ಗಂಟಲಿನ ದ್ರವದ ಮಾದರಿಯನ್ನು ಕರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನದ್ದು ಕೊಲೆ; ತನಿಖೆಯಾಗಬೇಕು ಎಂದ ಕುಟುಂಬ

ಈ ತರಕಾರಿ ವ್ಯಾಪಾರಿಯ ಟ್ರಾವೆಲ್​ ಹಿಸ್ಟರಿಯನ್ನು ಆರೋಗ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈತನ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್​ಗೆ ಒಳಪಡಿಸಲು ಸಿದ್ಧತೆ ಮಾಡುತ್ತಿದ್ದಾರೆ.

ಇಂದು 2 ಕೇಸ್​ಗಳು ಪತ್ತೆ

ರಾಮನಗರ ಜಿಲ್ಲೆಯಲ್ಲಿ ಇಂದು ಎರಡು ಹೊಸ ಕೇಸ್​ಗಳು ಪತ್ತೆಯಾಗಿವೆ. ಪಟ್ಟಣದ ಟಿಪ್ಪುನಗರದ ನಿವಾಸಿಗಳಾದ ತಾಯಿ (48), ಮಗ (28)ನಲ್ಲಿ ಕರೊನಾ ಕಾಣಿಸಿಕೊಂಡಿದೆ. ಈ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರಿಗೂ ರಾಮನಗರದ ಕೊವಿಡ್​-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಇದನ್ನೂ ಓದಿ: PHOTOS| ಶುಭಾ ಪೂಂಜ ಕೈ ಹಿಡಿಯುವ ವರನ್ಯಾರು ಗೊತ್ತ? ಇಲ್ಲಿವೆ ನೋಡಿ ಈ ಜೋಡಿಯ ಫೋಟೋಗಳು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net