ಶಿವಮೊಗ್ಗದಲ್ಲಿ ಕರೊನಾಗೆ ಮೊದಲ ಬಲಿ

corona new
Published on

ಶಿವಮೊಗ್ಗ: ಮೂತ್ರಕೋಶ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಮೆಗ್ಗಾನ್​ ಆಸ್ಪತ್ರೆ ದಾಖಲಾಗಿದ್ದ 56 ವರ್ಷದ ಮಹಿಳೆ ಚಿಕಿತ್ಸೆ ಫಲಿಸಿದೆ ಮಂಗಳವಾರ ಮೃತಪಟ್ಟಿದ್ದಾರೆ. ಆದರೆ, ಮರುದಿನವೇ ಮೃತರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಹಿಳೆ ಮೃತರು. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯು ಮೂರು ದಿನಗಳ ಹಿಂದೆ ಮೆಗ್ಗಾನ್​ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಮಹಿಳೆಯ ಗಂಟಲು ದ್ರವ ಸಂಗ್ರಹ ಮಾಡಿ ಲ್ಯಾಬ್​ಗೆ ಕಳುಹಿಸಲಾಗಿದ್ದು, ವರದಿ ಬರುವ ಮುನ್ನವೇ ಅಂದರೆ ಮಂಗಳವಾರ ತಡರಾತ್ರಿ ಅಸುನೀಗಿದ್ದರು. ಇದನ್ನೂ ಓದಿರಿ ಯುವಕ ಮೃತಪಟ್ಟ ಎರಡು ದಿನದ ಬಳಿಕ ಕುಟುಂಬಸ್ಥರಿಗೆ ಕಾದಿತ್ತೊಂದು ಶಾಕ್​!

ಮಹಿಳೆಯ ಗಂಟಲ ದ್ರವದ ಲ್ಯಾಬ್​ ರಿಪೋರ್ಟ್​ ಬುಧವಾರ ಬೆಳಗ್ಗೆ ಬಂದಿದ್ದು, ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಶವವನ್ನು ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಒಪ್ಪಿಸಲಾಗಿದ್ದು, ಕರೊನಾ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್​ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕರೊನಾಗೆ ಮೊದಲ ಬಲಿ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net