ವಾರ್ಷಿಕ ಚಟುವಟಿಕೆಗಳ ಸಮಾರೋಪ ‘ಸಂಸ್ಕೃತಿ’ಗೆ ಚಾಲನೆ

ತುಮಕೂರಿನ ಸಿದ್ಧಗಂಗಾ ಮಹಿಳಾ ಪಿಯು ಕಾಲೇಜಿನಲ್ಲಿ ‘ಸಂಸ್ಕೃತಿ’ ಸಮಾರೋಪಕ್ಕೆ ಶ್ರೀಧೀರಾನಂದ ಸ್ವಾಮಿ ಚಾಲನೆ ನೀಡಿದರು. ಎನ್.ಪ್ರಿಯಾಂಕಾ, ಪಿ.ಚಂದ್ರಶೇಖರ್, ಜಿ.ಎಸ್.ರೇಣುಕಪ್ಪ ಮತ್ತಿತರರು ಇದ್ದರು.
ತುಮಕೂರಿನ ಸಿದ್ಧಗಂಗಾ ಮಹಿಳಾ ಪಿಯು ಕಾಲೇಜಿನಲ್ಲಿ ‘ಸಂಸ್ಕೃತಿ’ ಸಮಾರೋಪಕ್ಕೆ ಶ್ರೀಧೀರಾನಂದ ಸ್ವಾಮಿ ಚಾಲನೆ ನೀಡಿದರು. ಎನ್.ಪ್ರಿಯಾಂಕಾ, ಪಿ.ಚಂದ್ರಶೇಖರ್, ಜಿ.ಎಸ್.ರೇಣುಕಪ್ಪ ಮತ್ತಿತರರು ಇದ್ದರು.
Published on

ತುಮಕೂರು: ನಗರದ ಸಿದ್ಧಗಂಗಾ ಮಹಿಳಾ ಪಿಯು ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ‘ಸಂಸ್ಕೃತಿ’ ವಿದ್ಯಾರ್ಥಿನಿಯರ ವಿವಿಧ ಚಟುವಟಿಕೆಗಳೊಂದಿಗೆ ವರ್ಣರಂಜಿತವಾಗಿ ನಡೆಯಿತು.

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ ಅವರ ಪಾದಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗಿಯಾದರು.

ರಾಮಕೃಷ್ಣ ಆಶ್ರಮದ ಶ್ರೀಧೀರಾನಂದ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು, ಜಿಪಂ ಉಪಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಸಮಾರೋಪ ಭಾಷಣ ಮಾಡಿದರು.

ಗಾಯಕಿ ದಿವ್ಯಾ ಆಲೂರು ಮಾತನಾಡಿ, ಮಕ್ಕಳಲ್ಲಿ ಪುಸ್ತಕ-ಮೊಬೈಲ್‌ನ ಅಂತರವಿರಲಿ, ಪುಸ್ತಕ ಸರಿ, ತಪ್ಪು, ಮಾರ್ಗದರ್ಶನ ನೀಡಬಲ್ಲದು ಎಂದರು.

ಅನುಭವ, ಸಾಧನೆ, ತಿರುವು ಇವೇ ಮುಂತಾದವುಗಳ ಹಾಳೆಗಳ ಆಗರ ಹಾಗೂ ಪ್ರತಿ ಪುಟವು ಒಂದೊಂದು ಅನುಭವ ನೀಡಲಿದ್ದು, ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.

ರಾಷ್ಟ್ರೀಯ ವಾಲಿಬಾಲ್ ಮಹಿಳಾ ತಂಡದ ತರಬೇತುಗಾರ್ತಿ ಎನ್.ಪ್ರಿಯಾಂಕಾ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.

ಸಿದ್ಧಗಂಗಾ ಪಿಯು ಕಾಲೇಜುಗಳ ಸಂಯೋಜನಾಧಿಕಾರಿ ಜಿ.ಎಸ್.ರೇಣುಕಪ್ಪ ಮಾತನಾಡಿ, ಸಾಮಾನ್ಯದಿಂದ ಅಸಾಮಾನ್ಯನಾಗುವುದೇ ಶಿಕ್ಷಣ. ಎಲ್ಲರೂ ಉನ್ನತ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಎಂದರು.

ಪ್ರಾಚಾರ್ಯ ಪಿ.ಚಂದ್ರಶೇಖರ್ ಮಾತನಾಡಿ, ಸಂಸ್ಕೃತಿ ಉದ್ಘಾಟನೆಯಿಂದ ಸಮಾರೋಪದವರೆಗಿನ ಚಟುವಟಿಕೆಗಳ ನೆನಪು ಮಾಡಿದರು. ಸಂಸ್ಕೃತಿ ಮಕ್ಕಳಲ್ಲಿನ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ ಎಂದರು.

ಸಂಸ್ಕೃತಿ ಸಂಚಾಲಕಿ ಪಿ.ಕೆ.ಅಶ್ವಿನಿ ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಬಿಂದುಶ್ರೀ, ಆರ್.ಸಿ.ಬಸವರಾಜು, ಎಸ್.ಶುಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net