ಮಾಲಿನ್ಯ ತಡೆಯದಿದ್ದರೆ ಹೋರಾಟ ತೀವ್ರ

 ಚೇಳಾರು ಖಂಡಿಗೆಯಲ್ಲಿ ನಂದಿನಿ ನದಿ ನೀರು ಕಲುಷಿತಗೊಂಡಿರುವ ನದಿ ಪ್ರದೇಶದಲ್ಲಿ ಶುಕ್ರವಾರ ನಂದಿನಿ ನದಿ ಹೋರಾಟ ಸಮಿತಿ, ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿದರು. ಹೋರಾಟ ಸಮಿತಿ ಸುಕೇಶ್ ಶೆಟ್ಟಿ ಖಂಡಿಗೆ, ಸಮಿತಿ ಸದಸ್ಯ ದಿವಾಕರ ಸಾಮಾನಿ, ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಜಯಾನಂದ ಮೊದಲಾದವರು ಪಾಲ್ಗೊಂಡಿದ್ದರು.
ಚೇಳಾರು ಖಂಡಿಗೆಯಲ್ಲಿ ನಂದಿನಿ ನದಿ ನೀರು ಕಲುಷಿತಗೊಂಡಿರುವ ನದಿ ಪ್ರದೇಶದಲ್ಲಿ ಶುಕ್ರವಾರ ನಂದಿನಿ ನದಿ ಹೋರಾಟ ಸಮಿತಿ, ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿದರು. ಹೋರಾಟ ಸಮಿತಿ ಸುಕೇಶ್ ಶೆಟ್ಟಿ ಖಂಡಿಗೆ, ಸಮಿತಿ ಸದಸ್ಯ ದಿವಾಕರ ಸಾಮಾನಿ, ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಜಯಾನಂದ ಮೊದಲಾದವರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚೇಳಾರು-ಖಂಡಿಗೆಯಲ್ಲಿ ಹಠಾತ್ ಪ್ರತಿಭಟನೆ
  • ಸಮಿತಿ ಎಚ್ಚರಿಕೆ
ವಿಜಯವಾಣಿ ಸುದ್ದಿಜಾಲ ಗುರುಪುರ
ಚೇಳಾರು ಖಂಡಿಗೆಯಲ್ಲಿ ನಂದಿನಿ ನದಿ ನೀರು ಕಲುಷಿತಗೊಂಡಿರುವ ನದಿ ಪ್ರದೇಶದಲ್ಲಿ ಶುಕ್ರವಾರ ನಂದಿನಿ ನದಿ ಹೋರಾಟ ಸಮಿತಿ, ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಮೇ 15ರಂದು ಖಂಡಿಗೆಯಲ್ಲಿ ಜಾತ್ರೆ ಆರಂಭಗೊಂಡಿದ್ದು, ಜಾತ್ರೆ ಪ್ರಯುಕ್ತ ಸಂಪ್ರದಾಯದಂತೆ ಖಂಡಿಗೆ ಕೆರೆಯಲ್ಲಿ ಮೀನು ಹಿಡಿಯಲಾಗುತ್ತದೆಯಾದರೂ ಈ ಬಾರಿ ನದಿ-ಕೆರೆ ಎನ್ನದೆ ಸ್ಥಳೀಯವಾದ ಎಲ್ಲ ಜಲಾಶ್ರಯ ಕಲುಷಿತಗೊಂಡಿದೆ. ಇಲ್ಲಿ ಮೀನು ಹಿಡಿಯಲು ಜನರಿಲ್ಲದಂತಾಗಿದೆ ಎಂದು ಸಮಿತಿ ದೂರಿದೆ.
ಹೋರಾಟ ಸಮಿತಿ ಸುಕೇಶ್ ಶೆಟ್ಟಿ ಖಂಡಿಗೆ ಮಾತನಾಡಿ, ಸಮಸ್ಯೆ ಬಗೆಹರಿಯುವವರೆಗೆ ಹೋರಾಟ ಮುಂದುವರಿಯಲಿದೆ. ಹಣದಾಸೆ, ರಾಜಕೀಯ ಒತ್ತಡಕ್ಕೆ ಮಣಿದು ಹೋರಾಟ ಸ್ಥಗಿತಗೊಳ್ಳದು ಎಂದರು.
ಸಮಿತಿಯ ನಿತಿನ್ ಶೆಟ್ಟಿ ಮಾತನಾಡಿ, ಮುಂದಿನ 6 ತಿಂಗಳೊಳಗೆ ನಂದಿನಿ ನದಿ ಸೇರುತ್ತಿರುವ ಖಾಸಗಿ ಆಸ್ಪತ್ರೆ, ಎಸ್‌ಟಿಪಿ ಪ್ಲಾಂಟ್, ವೆಟ್‌ವೆಲ್ ನೀರು, ಖಾಸಗಿ ವಸತಿ ಸಮುಚ್ಛಯಗಳ ತ್ಯಾಜ್ಯ ನದಿಗೆ ಸೇರುವುದು ನಿಲ್ಲದೆ ಹೋದಲ್ಲಿ, ಜಿಲ್ಲಾಡಳಿತದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಧಾರ್ಮಿಕ ಮುಖಂಡ ಕಿರಣ್ ಶೆಟ್ಟಿ ಕೆರೆಮನೆ, ಸಮಿತಿ ಸದಸ್ಯ ದಿವಾಕರ ಸಾಮಾನಿ, ಚೇಳಾರು ಗ್ರಾಪಂ ಮಾಜಿ ಅಧ್ಯಕ್ಷ ಜಯಾನಂದ ಮೊದಲಾದವರು ಪಾಲ್ಗೊಂಡಿದ್ದರು.

ಹಿಂದೆ ನಂದಿನಿಯಲ್ಲಿ ಮೀನು ಹಿಡಿಯಲು ಸಾವಿರಾರು ಜನ ಸೇರುತ್ತಿದ್ದರು. ಇಂದು ಬೆರಳೆಣಿಕೆ ಜನರು ನೀರಿಗಿಳಿಯುವ ಸಾಹಸ ಮಾಡಿದ್ದಾರೆ. ಇದು ಕಳವಳಕಾರಿ ಬೆಳವಣಿಗೆಯಾಗಿದೆ. ಇಲ್ಲಿ ವಕ್ಕರಿಸಿರುವ ಕಂಪನಿ, ಆಸ್ಪತ್ರೆ, ಎಸ್‌ಟಿಪಿ ಪ್ಲಾಂಟ್‌ಗಳಿಂದ ನಂದಿನಿಗೆ ತ್ಯಾಜ್ಯ ನೀರು ಸೇರುತ್ತಿವೆ. ಇದರಿಂದ ಪರಿಸರ ನಾಶದೊಂದಿಗೆ ಸ್ಥಳೀಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ.

ದಿವಾಕರ ಸಾಮಾನಿ ಸಮಿತಿ ಸದಸ್ಯ

ನಂದಿನಿ ನದಿ ನೀರು ಕಲುಷಿತಗೊಂಡಿರುವ ಬಗ್ಗೆ ಎರಡು ವರ್ಷಗಳಿಂದ ನಿರಂತರ ಹೋರಾಟ, ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ನದಿ ನೀರು ವಿಷಯುಕ್ತವಾಗಲು ಜಿಲ್ಲಾಡಳಿತ, ಮನಪಾ ನೇರ ಜವಾಬ್ದಾರಿಯಾಗಿದೆ.

ಜಯಾನಂದ ಚೇಳಾರು ಗ್ರಾಪಂ ಮಾಜಿ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net