ಬಾಲಕಾರ್ಮಿಕ ಪದ್ಧತಿ ವಿರುದ್ಧ ಹೋರಾಟ ಅಗತ್ಯ

20200612_105058
Published on

ಎಚ್.ಡಿ.ಕೋಟೆ: ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳಲ್ಲಿ ಬಾಲಕಾರ್ಮಿಕ ಪದ್ಧತಿ ಕೂಡ ಒಂದು ಎಂದು ತಹಸೀಲ್ದಾರ್ ಆರ್. ಮಂಜುನಾಥ್ ಅಭಿಪ್ರಾಯಪಟ್ಟರು.

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಪಟ್ಟಣದ ವಿಧಾನಸೌಧ ಆವರಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ ದ ಅವರು, ಇಂತಹ ಪದ್ಧತಿ ವಿರುದ್ಧ ಹೋರಾಟ ಅಗತ್ಯ ಎಂದರು.

ಇತ್ತೀಚೆಗೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಂತಹ ಅನಿಷ್ಟ ಪದ್ಧತಿಗಳನ್ನು ಕಡಿಮೆ ಮಾಡಿದೆ. ಹತ್ತು ಹದಿನೈದು ವರ್ಷದ ಹಿಂದೆ ಇದ್ದ ವ್ಯವಸ್ಥೆ ಇಂದು ಇಲ್ಲ. ಅಲ್ಲದೆ ಮಕ್ಕಳಿಗೂ ಕೂಡ ಓದುವುದಕ್ಕೆ ಸಾಕಷ್ಟು ಅವಕಾಶವಿವುದರಿಂದ ಈ ಪದ್ಧತಿ ಕಡಿಮೆ ಆಗಿದೆ ಎಂದರು.

ಹಿರಿಯ ಕಾರ್ಮಿಕ ಅಧಿಕಾರಿ ಶಶಿಧರ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಎಲ್ಲ ಕಡೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಬಾಲಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಉದ್ದೇಶದಿಂದ ಸರ್ಕಾರ 14 ಇಲಾಖೆಗಳಿಗೆ ಜವಾಬ್ದಾರಿ ನೀಡಿದೆ. ಹಾಗಾಗಿ ಅಂತಹ ಸಂಸ್ಥೆಗೆ 50,000 ರೂ.ವರೆಗೂ ದಂಡ ವಿಧಿಸುವುದರ ಜತೆಗೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.

ಗ್ರೇಡ್ 2 ತಹಸೀಲ್ದಾರ್ ಆನಂದ್, ಕಂದಾಯಾಧಿಕಾರಿ ಮಹೇಶ್, ಜೀವಿಕ ಬಸವರಾಜು, ಶೆಟ್ಟಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net