ಬೈಕ್ ಸವಾರನ ಎಡವಟ್ಟಿನಿಂದ ಸರಣಿ ಅಪಘಾತ :ಆಟೋಚಾಲಕ ಸ್ಥಳದಲ್ಲಿಯೇ ಸಾವು

accident
Published on

ಬೆಂಗಳೂರು: ಬೈಕ್ ಸವಾರನ ಎಡವಟ್ಟಿನಿಂದ ಬೈಕ್, ಆಟೋ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಸರಣಿ ಅಪಘಾತ ನಡೆದು ಆಟೋ ಚಾಲಕ ಮೃತಪಟ್ಟಿದ್ದಾನೆ.
ಮೂಲತಃ ವೇಲೂರು ಜಿಲ್ಲೆಯ ಹಾಗೂ ಹೆಬ್ಬಾಳ ನಿವಾಸಿ ಎಸ್.ಸೆಲ್ವರಾಜ್(೬೦) ಮೃತಪಟ್ಟ ಆಟೋ ಚಾಲಕ. ಗಟನೆಯಲ್ಲಿ ಆಟೋ ಪ್ರಯಾಣಿಕ ಲಕ್ಷ್ಮೀ ನರಸಪ್ಪ ಮತ್ತು ದ್ವಿಚಕ್ರ ವಾಹನ ಸವಾರ ಜಶ್ವಂತ್ ಸಿಂಗ್ ಗಾಯಗೊಂಡಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ೭.೧೦ ಕ್ಕೆ ಈ ಘಟನೆ ನಡೆದಿದೆ.

ಏಕಮುಖ ಸಂಚಾರವಿದ್ದರೂ ದ್ವಿಚಕ್ರ ವಾಹನ ಸವಾರ ಆಟೋ ಡಿಕ್ಕಿ ಹೊಡೆದಿದ್ದಾನೆ ಈ ವೇಳೆ ಬಲಕ್ಕೆ ತಿರುಗಿದ ಆಟೋಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಆಟೋ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬೈಕ್ ಸವಾರಿಗೆ ಕಾಲಿಗೆ ಗಾಯವಾಗಿದೆ ಮತ್ತು ಆಟೋದಲ್ಲಿದ್ದ ಪ್ರಯಾಣಿಕನಿಗೆ ಕಾಲು ಕಟ್ ಆಗಿದೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ೭.೧೦ ರ ಸುಮಾರಿನಲ್ಲಿ ಯಲಹಂಕ ರೈಲ್ವೆ ಸೇತುವೆ ಬಳಿ ದ್ವಿಚಕ್ರ ಸವಾರನೊಬ್ಬ ಒನ್‌ವೇ ಇದ್ದರೂ ಈ ರಸ್ತೆಯಲ್ಲಿ ಬಂದಿದ್ದಾನೆ. ಬಳಿಕ ಆಟೋಗೆ ಗುದ್ದಿದ್ದಾನೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಆಟೋಗೆ ಗುದ್ದಿದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಯಲಹಂಕ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net