

medical negligence : 2023ರಲ್ಲಿ ನಡೆಸಲಾದ ಶಸ್ತ್ರಚಿಕಿತ್ಸೆಯ ನಿರ್ಲಕ್ಷದಿಂದ ಮಹಿಳೆಯ ಎದೆಯಲ್ಲಿ ಶಸ್ತ್ರಚಿಕಿತ್ಸಾ ಮಾಗದರ್ಶಿ ಗೈಡ್ ವೈರ್ ಸಿಲುಕಿಕೊಂಡಿರುವ ಆರೋಪದ ಮೇರೆಗೆ ತಿರುವನಂತಪುರದ ಸರ್ಕಾರಿ ವೈದ್ಯನ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ.
ಸುಬ್ಬಯ್ಯ ಎಂಬ ಮಹಿಳೆಯು 2023ರಲ್ಲಿ ಥೈರಾಡ್ ಸಮಸ್ಯೆಯಿಂದ ತಿರುವನಂತಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಕ್ಯಾತಿಟರ್ಗಳನ್ನು ಮಾರ್ಗದರ್ಶಿಸಲು ಬಳಸುವ ಗೈಡ್ ವೈರ್ ಅನ್ನು ತನ್ನ ದೇಹದಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಶಸ್ತ್ರಚಿಕಿತ್ಸೆ ನಂತರ ರೋಗಿಯ ಹೃದಯದ ಬಳಿ ಗೈಡ್ ವೈರ್ ಸಿಲುಕಿಕೊಂಡಿದ್ದು, ಗಂಭೀರ ಅಸ್ವಸ್ಥತೆಯನ್ನು ಉಂಟುಮಾಡಿದೆ. ಇನ್ನು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ರಾಜೀವ್ ಆರೋಪವನ್ನು ಒಪ್ಪಿಕೊಂಡಿದ್ದಾರೆ ಎಂದು ಸುಬ್ಬಯ್ಯ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಮಹಿಳೆ ಅತಿಯಾದ ತೀವ್ರ ಕೆಮ್ಮಿನಿಂದ ಬಳಲ್ಪಟ್ಟಿದ್ದು, ನಂತರ ಇವರು ವೈದ್ಯರ ಬಳಿ ಪರೀಕ್ಷೆ ನಡೆಸಿದ್ದಾರೆ. ಇದಾದ ಬಳಿಕ ಅವರ ಹೃದಯಕ್ಕೆ ಹತ್ತಿರವಾಗಿ ಗೈಡ್ ವೈರ್ ಇರುವುದರಿಂದ ಅದನ್ನು ತೆಗೆದುಹಾಕುವುದು ತುಂಬಾ ಅಪಾಯಕಾರಿ ಎಂದು ಸೂಚಿಸಿದ್ದಾರೆ. ಇನ್ನು ಡಾ. ರಾಜೀವ್ ತಪಾಸಣೆಗಾಗಿ ಹಣವನ್ನು ನೀಡಿದರೂ, ನಂತರ ಅವರು ಮಾಡಿದ ತಪ್ಪಿಗೆ ಹೊಣೆಗಾರರಾಗಿರಲು ನಿರಾಕರಿಸಿ, ಅರವಳಿಕೆ ನೀಡಿದವರ ಮೇಲೆ ದೂಷಿಸಿದರು ಎಂದು ಆರೋಪಿಸದರು.
ಈ ಆರೋಪವನ್ನು ಆಧರಿಸಿ ತಿರುವನಂತಪುರಂನ ಸರ್ಕಾರಿ ಜನರಲ್ ಆಸ್ಪತ್ರೆಯ ಡಾ. ರಾಜೀವ್ ಕುಮಾರ್ ವಿರುದ್ಧ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯವನ್ನುಂಟು ಮಾಡಿದಕ್ಕಾಗಿ ಐಪಿಸಿ ಸೆಕ್ಷನ್ 336 ಮತ್ತು 338 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)