ಅಪಘಾತದಲ್ಲಿ ಯೋಧನ ಪತ್ನಿ ಸಾವು

12han1( jayalakshmi) (1)
Published on

ಹನಗೋಡು: ಕೇರಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಹನಗೋಡು ಗ್ರಾಮದ ಯೋಧನ ಪತ್ನಿ ಮೃತಪಟ್ಟಿದ್ದಾರೆ.

ಕೊಚ್ಚಿನ್‌ನ ಫೋರ್ಟ್ ಕ್ರಸ್ಟ್‌ನಲ್ಲಿ ಸಿ.ಐ.ಎಸ್.ಎಫ್.ಯೋಧರಾಗಿರುವ ಎಚ್.ಕೆ.ರಮೇಶ್ ಅವರ ಪತ್ನಿ ಜಯಲಕ್ಷ್ಮೀ (47) ಮೃತರು. ಇವರಿಗೆ ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ.

ಕೊಚ್ಚಿನ್‌ನಲ್ಲಿ ವಾಸವಿದ್ದ ಈ ದಂಪತಿ ಗುರುವಾರ ಸಂಜೆ ವಾಯುವಿಹಾರಕ್ಕೆಂದು ತೆರಳಿದ್ದರು. ಆ ವೇಳೆ ಅತಿ ವೇಗದಿಂದ ಬಂದ ಅಪರಿಚಿತ ವಾಹನ ಜಯಲಕ್ಷ್ಮೀ ಅವರಿಗೆ ಡಿಕ್ಕಿ ಹೊಡೆದಿದೆ. ತೀವ್ರ ಪೆಟ್ಟು ಬಿದ್ದ ಅವರನ್ನು ರಮೇಶ್ ತಮ್ಮ ಸಹೋದ್ಯೋಗಿಗಳ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಶುಕ್ರವಾರ ಮಧ್ಯಾಹ್ನ ಎರ್ನಾಕುಲಂನ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಶವವನ್ನು ಸಿ.ಐ.ಎಸ್.ಎಫ್. ಕ್ಯಾಂಪ್‌ಗೆ ಕೊಂಡೊಯ್ಯಲಾಯಿತು. ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಅವರ ಕುಟುಂಬದವರು ಅಂತಿಮ ದರ್ಶನ ಪಡೆದರು. ಶನಿವಾರ ಬೆಳಗ್ಗೆ 10 ಗಂಟೆಗೆ ಸ್ವಗ್ರಾಮ ಹನಗೋಡಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net