

ಉಜ್ಜಯಿನಿ : ದೇಶದ ಅನರ್ಘ್ಯ ರತ್ನ ರತನ್ ಟಾಟಾ ಸಾವು ದೇಶಕ್ಕೆ ಬಹುದೊಡ್ಡ ನಷ್ಟ ಎಂದು ಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಂತಾಪ ವ್ಯಕ್ತಪಡಿಸಿದ್ದಾರೆ
ಭಾರತೀಯ ಕೈಗಾರಿಕೋದ್ಯಮಿ, ಬಡವರ ಬಂಧು, ದೇಶಪ್ರೇಮಿ, ಬೆಲೆ ಕಟ್ಟಲಾಗದ ರತ್ನ ರತನ್ ಜಿ ಟಾಟಾ. ತಮ್ಮ ಚಿಕ್ಕಪ್ಪ ಜೆ ಆರ್ ಡಿ ಟಾಟಾ ನಂತರ ಕಂಪನಿಯ ಮೌಲ್ಯವನ್ನು ದಶಲಕ್ಷ ಕೋಟಿಗಳಿಗೇರಿಸಿದ ಧೀಮಂತ. ದೇಶದ ಪ್ರತಿ ಪ್ರಜೆಯೂ ಒಂದಲ್ಲ ಒಂದು ರೀತಿಯಲ್ಲಿ ರತನ್ ಟಾಟಾ ರವರ ಸೇವೆಯನ್ನು, ಅವರು ನೀಡಿದ ಉತ್ಪನ್ನಗಳನ್ನು ಬಳಸಿಕೊಂಡಿದ್ದಾರೆ. ಸರಳ ಸಜ್ಜನ ವ್ಯಕ್ತಿತ್ವದ ರತನ್ ಟಾಟಾರ ಅಗಲಿಕೆಯು ಕೇವಲ ಒಬ್ಬ ಉದ್ಯಮಿಯನ್ನು ಕಳೆದುಕೊಂಡಿಲ್ಲ, ಬದಲಾಗಿ ನಿಜವಾದ ಒಬ್ಬ ದೇಶಭಕ್ತನನ್ನು, ಹೃದಯವಂತನನ್ನು ಕಳೆದುಕೊಂಡಂತಾಗಿದೆ ಎಮದು ಜಗದ್ಗುರುಗಳು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.