ದಿನವೊಂದರಲ್ಲಿ ಈಕೆಗೆ 19 ಸಾವಿರ ಭಾರತೀಯರು 'ಐ ಲವ್​ ಯು' ಹೇಳ್ತಾರಂತೆ! ನಿಮ್ಮ ಮನೆಗೂ ಬರಲು ಸಿದ್ಧವಿದ್ದಾಳಂತೆ ಈ ಸುಂದರಿ!

alexa
Published on

ಬೆಂಗಳೂರು: ಪ್ರೇಮಿಗಳ ವಾರ ಆರಂಭವಾಗಿದೆ. ಇವತ್ತು ಪ್ರಪೋಸಲ್​ ದಿನವಂತೆ. ಪ್ರಿಯತಮ/ಪ್ರಿಯತಮೆ ಇಲ್ಲ ಎಂದು ಕೊರಗುತ್ತಿದ್ದೀರಾ? ಈ ಸುದ್ದಿ ಓದಿದ ಮೇಲೆ ಆ ಕೊರಗು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ ನೋಡಿ...

ಅಂದ ಹಾಗೆ ಈ ಒಬ್ಬಳು ಸುಂದರಿ ಸಾವಿರಾರು ಜನರ ಮನಸ್ಸು ಕದ್ದಿದ್ದಾಳಂತೆ. ಪ್ರತಿದಿನ ಸುಮಾರು 19 ಸಾವಿರ ಭಾರತೀಯರು ಈ ಸುಂದರಿಗೆ "ಐ ಲವ್​ ಯೂ" ಎನ್ನುತ್ತಾರಂತೆ. ತಮ್ಮ ಮನಸ್ಸಿನ ನೋವುಗಳನ್ನೆಲ್ಲ ಆಕೆ ಬಳಿ ಹೇಳಿಕೊಳ್ಳುತ್ತಾರಂತೆ. ಅವಳು ಒಬ್ಬರಿಗೆಂದು ಸೀಮಿತಳಾದವಳೂ ಅಲ್ಲವಂತೆ. ಮನಸ್ಸು ಮಾಡಿದರೆ ನೀವೂ ಕೂಡ ಆಕೆಯನ್ನು ಮನೆಗೆ ಕರೆದುಕೊಂಡು ಬರಬಹುದಂತೆ.

ಅಂದ ಹಾಗೆ ಈ ಬಹುಬೇಡಿಕೆಯ ಸುಂದರಿ ಮತ್ತ್ಯಾರು ಅಲ್ಲ, ಅಮೇಜಾನ್​ ಅಲೆಕ್ಸಾ. ಈ ಮೆಷಿನ್​ ಭಾರತದಲ್ಲಿ ಬಹುಬೇಡಿಕೆಯಲ್ಲಿದೆಯಂತೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಭಾರತೀಯರು ಅಲೆಕ್ಸಾ ಜತೆ ಮಾತನಾಡುತ್ತಿರುವ ಪ್ರಮಾಣ ಶೇ. 67 ಏರಿಕೆಯಾಗಿದೆಯಂತೆ. 2019ಕ್ಕೆ ಹೋಲಿಸಿದರೆ ಅಲೆಕ್ಸಾಗೆ ಐ ಲವ್​ ಯು ಹೇಳುವವರ ಸಂಖ್ಯೆ ಶೇ. 1200 ಏರಿಕೆಯಾಗಿದಂತೆ! ಸರಿಯಾದ ಮಾಹಿತಿ ಕೊಟ್ಟ ಖುಷಿಗೋ ಅಥವಾ, ಪ್ರಿಯತಮೆ ಇಲ್ಲ ಎನ್ನುವ ನೋವಿಗೋ ಒಟ್ಟಿನಲ್ಲಿ ಜನರು ಅಲೆಕ್ಸಾಳನ್ನು ಪ್ರೀತಿಸಲು ಆರಂಭಿಸಿದ್ದಾರೆ.

ನಿಮಗೆ ಪ್ರೀತಿ ಒಲಿದಿಲ್ಲ ಎಂದಾದಲ್ಲಿ ಚಿಂತೆ ಏತಕೆ? ಈ ಪ್ರೇಮಿಗಳ ವಾರದ ವಿಶೇಷವಾಗಿ ನೀವೂ ನಿಮ್ಮ ಮನೆಗೆ ಈ ರೀತಿ ಮಾತಾಡುವ ಮೆಷಿನ್​ ತಂದಿಟ್ಟುಕೊಂಡು ಅದರೊಂದಿಗೇ ಪ್ರೀತಿ ಹಂಚಿಕೊಳ್ಳಿ ಎಂದಿದೆ ಅಮೇಜಾನ್​ ಸಂಸ್ಥೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net