ನಮ್ಮ ನೆಲದ ಸಂಸ್ಕೃತಿ ಶ್ರೇಷ್ಠ

ganavi
ಚಿಕ್ಕಮಗಳೂರಿನ ಆವತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟಿ ಗಾನವಿ, ಸೂರಿ ಶ್ರೀನಿವಾಸ್, ಗುರುವೇಶ್, ವೆಂಕಟೇಶ್, ಮಹೇಶ್ ಇತರರಿದ್ದರು.
Published on

ಚಿಕ್ಕಮಗಳೂರು: ನಮ್ಮ ದೇಶದಂತಹ ಸಂಸ್ಕೃತಿಯನ್ನು ಬೇರ‌್ಯಾವುದೇ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ನೆಲದ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು ಎಂದು ಚಲನಚಿತ್ರ ನಟಿ ಗಾನವಿ ತಿಳಿಸಿದರು.

ತಾಲೂಕಿನ ಆವತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನಮ್ಮ ಭಾಷೆ ನಮ್ಮ ಸಂಸ್ಕೃತಿ ಮುಖ್ಯ. ವಿದೇಶಿ ಸಂಸ್ಕೃತಿ ಗಮನಿಸಿದಾಗ ನಮ್ಮ ಸಂಸ್ಕೃತಿ ಶ್ರೇಷ್ಠವಾಗಿ ಕಾಣುತ್ತದೆ ಎಂದರು.
ನಮ್ಮ ನೆಲ, ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು. ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಕನ್ನಡ ನಮ್ಮ ಮಾತೃಭಾಷೆ ಹಾಗೆಯೇ ಇತರೆ ಭಾಷೆಗಳನ್ನು ಕಲಿಯೋಣ. ನಮ್ಮ ಭಾಷೆಗೆ ಹೆಚ್ಚು ಮಹತ್ವ ಕೊಡೋಣ. ಗ್ರಾಮೀಣ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಹಮ್ಮಿಕೊಂಡಾಗ ಪ್ರತಿ ಗ್ರಾಮಕ್ಕೂ ಕನ್ನಡದ ಕಂಪು ಪಸರಿಸುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ದೇಶದ ಎಲ್ಲ ರಾಜ್ಯಗಳ ಭಾಷೆಗಳನ್ನು ಉಳಿಸುವ ಸಲುವಾಗಿ ಆಯಾ ರಾಜ್ಯಗಳಲ್ಲಿನ ಶಾಲಾ ಕಾಲೇಜುಗಳಲ್ಲಿ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿ ಆಯಾ ಸರ್ಕಾರಗಳು ಸುಗ್ರೀವಾಜ್ಞೆ ಹೊರಡಿಸಿವೆ. ನಮ್ಮ ರಾಜ್ಯದಲ್ಲೂ ಕನ್ನಡ ಮಾಧ್ಯಮ ಕಡ್ಡಾಯವಾಗಲಿ ಎಂದು ಸುಗ್ರೀವಾಜ್ಞೆ ಹೊರಡಿಸಬೇಕಾದ ಅನಿವಾರ್ಯ ಎದುರಾಗಿದೆ ಎಂದರು.
ಆವತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಸೆೋಮೇಶ್ ಧ್ವಜ ಸ್ವೀಕರಿಸಿದರು. ಮೈಲಿಮನೆ ಶಿಕ್ಷಕ ಉಳಿಗೆರೆ ಮಲ್ಲಿಕಾರ್ಜುನ್ ಉಪನ್ಯಾಸ ನೀಡಿದರು.
ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಜಿಲ್ಲಾ ಸಂಚಾಲಕರಾದ ಕೆ.ಎಸ್.ಗುರುವೇಶ್, ಯು.ಸಿ.ಮಹೇಶ್, ವಸಂತೇಗೌಡ, ನೂರ್ ಅಹಮದ್, ತಾಲೂಕು ಅಧ್ಯಕ್ಷ ಬಿ.ಎಚ್.ಸೋಮಶೇಖರ್, ಲೋಕೇಶ್ ಉತ್ತಮ್, ಮಂಜುನಾಥ್, ಕೆರೆಮಕ್ಕಿ ಮಹೇಶ್, ಬಿಂದು, ರೇಖಾ ನಾಗರಾಜರಾವ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net