

ಬೆಂಗಳೂರು: ಮನೆ ಸಮೀಪದ ಆಟವಾಡುತ್ತಿದ್ದ 8 ವರ್ಷದ ಅಪ್ರಾಪ್ತೆಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಎ್ಟಿಎಸ್‌ಸಿ 1ನೇ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಹುಬ್ಬಳ್ಳಿ ಇಂಡಿಪಂಪ್ ರಸ್ತೆ ನಿವಾಸಿ ತಬ್ರೇಜ್ ಖಾನ್ ಪಠಾಣ್ ಅಲಿಯಾಸ್ ತಬ್ರೇಜ್ (32) ಅಪರಾಧಿ. 2018ರಲ್ಲಿ ಜ್ಞಾನಭಾರತಿನಗರ ಬಳಿಯ ಮಾರುತಿನಗರಕ್ಕೆ ನೌಕರಿ ಬಯಸಿ ಬಂದಿದ್ದ. ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಹಣ ಕೊಡುವುದಾಗಿ ಆಮಿಷವೊಡ್ಡಿದ್ದ ಸ್ನೇಹಿತನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನೊಂದ ಬಾಲಕಿ ತಾಯಿ ಕೊಟ್ಟ ದೂರಿನ ಮೇರೆಗೆ ಜ್ಞಾನಭಾರತಿನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತಬ್ರೇಜ್ ಖಾನ್ ಪಠಾಣ್ ಬಂಧಿಸಿದ್ದರು.
ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಕೆ.ಎನ್. ರೂಪಾ, ವಾದ-ಪ್ರತಿವಾದ ಆಲಿಸಿ ತಬ್ರೇಜ್ ಖಾನ್ ಪಠಾಣ್ ಅಪರಾಧಿ ಎಂದು ಪ್ರಕಟಿಸಿ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ 25 ಸಾವಿರ ರೂ. ಪರಿಹಾರ ಒದಗಿಸುವಂತೆ ಆದೇಶಿಸಿದ್ದಾರೆ.