

ಮುಂದುವರಿದ ಭಾಗ...
ಮನುಷ್ಯರು ಮರಗಳನ್ನು ಕಡಿದು ಅರಣ್ಯ ನಾಶವಾಗಿರುವುದರಿಂದ ವಾತಾವರಣದಲ್ಲಿ ಮತ್ತು ಭೂಮಿಯ ಮೇಲೆ ತೇವಾಂಶ ಕಡಿಮೆಯಾಗಿರುವುದರಿಂದ ಇವುಗಳ ವಾಸಸ್ಥಾನ ಬಹಳಷ್ಟು ನಾಶವಾಗಿದೆ. ಇವುಗಳು ವಲಸೆ ಹೋಗುವ ಸಂದರ್ಭದಲ್ಲಿ ರಸ್ತೆಗಳಲ್ಲಿ ವಾಹನಗಳು ಚಲಿಸುವುದರಿಂದ ಬಹಳಷ್ಟು ಏಡಿಗಳು ವಾಹನಗಳ ಚಕ್ರಕ್ಕೆ ಸಿಲುಕಿ ಸತ್ತು ಹೋಗುತ್ತವೆ.
ಆದ್ದರಿಂದ ಇವುಗಳ ರಕ್ಷಣೆಗಾಗಿ, ಆಸ್ಟ್ರೇಲಿಯಾ ಸರ್ಕಾರ ಕೆಲವು ಕಾನೂನು ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಇವುಗಳ ವಲಸೆ ಸಮಯದಲ್ಲಿ ವಾಹನಗಳಿಗೆ ನಿಷೇಧಿತ ಪ್ರದೇಶ ಎಂದು ಘೋಷಿಸಿದೆ. ರಸ್ತೆಯ ಎರಡೂ ಕಡೆಯಲ್ಲಿ, ಏಡಿಗಳು ರಸ್ತೆಯ ಮೇಲೆ ಬಾರದ ಹಾಗೆ ಸುಮಾರು ಎರಡು ಅಡಿ ಎತ್ತರದ ತಾತ್ಕಾಲಿಕ ಗೋಡೆಯನ್ನು, ಸುಮಾರು 12 ಕಿ.ಮೀ. ಉದ್ದದವರೆಗೆ ನಿರ್ಮಿಸಲಾಗುತ್ತದೆ. ಅವುಗಳು ಹಾದು ಹೋಗಲು ಸುಲಭವಾದ ಚರಂಡಿ ಮತ್ತು ಸುರಂಗಗಳನ್ನು ನಿರ್ಮಿಸಲಾಗಿದೆ. ಸಾಧ್ಯವಾದರೆ ಒಮ್ಮೆ ಕ್ರಿಸ್ಮಸ್ ಐಲ್ಯಾಂಡ್ಗೆ ಹೋಗಿ ಬನ್ನಿ.