More

    ಸ್ನಾನ ಮಾಡಿ ಸಂತಾನಾಭಿವೃದ್ಧಿಗೆ ಕೂರುತ್ತವೆ ಏಡಿಗಳು! ಅಚ್ಚರಿ ತರಿಸುವ ವಿಚಾರಗಳಿವು..

    ಮುಂದುವರಿದ ಭಾಗ…

    ಸ್ನಾನ ಮಾಡಿ ಸಂತಾನಾಭಿವೃದ್ಧಿಗೆ ಕೂರುತ್ತವೆ ಏಡಿಗಳು! ಅಚ್ಚರಿ ತರಿಸುವ ವಿಚಾರಗಳಿವು..ಕ್ರಿಸ್ಮಸ್ ಐಲ್ಯಾಂಡ್‌ನ ಕೆಂಪು ಏಡಿಗಳ ವಲಸೆ ಜೀವನ ಬಹಳ ವಿಶೇಷವಾಗಿರುತ್ತದೆ. ಲಕ್ಷಾಂತರ ಗಂಡು ಏಡಿಗಳು, ಮುಖ್ಯವಾಗಿ ದೊಡ್ಡ ದೊಡ್ಡ ಏಡಿಗಳು, ಮೊದಲು ವಲಸೆ ಆರಂಭಿಸಿ ಸಮುದ್ರದ ದಡವನ್ನು ತಲುಪುತ್ತವೆ. ಐದಾರು ದಿವಸಗಳ ನಂತರ ಹೆಣ್ಣುಗಳು ಬಂದು ಸೇರುತ್ತವೆ. ದಡವನ್ನು ತಲುಪಿದ ಮೇಲೆ, ಮೊಟ್ಟ ಮೊದಲು, ಸಮುದ್ರದಲ್ಲಿ ಸ್ನಾನ ಮಾಡಿ, ಪ್ರಯಾಣದಿಂದಾಗಿ ಒಣಗಿರುವ ದೇಹದಲ್ಲಿ ತೇವಾಂಶವನ್ನು ತುಂಬಿಕೊಳ್ಳುತ್ತವೆ. ನಂತರ ಗಂಡು ಏಡಿಗಳು ದಡಕ್ಕೆ ಬಂದು ಮರಳು ಅಥವಾ ಮಣ್ಣಿನಲ್ಲಿ ಬಿಲವನ್ನು ಕೊರೆಯಲು ಆರಂಭಿಸುತ್ತವೆ. ಆ ಸಂದರ್ಭದಲ್ಲಿ ಗಂಡು ಏಡಿಗಳ ಮಧ್ಯೆ, ಬಿಲ ಕೊರೆಯುವ ಪ್ರಶಸ್ತ ಸ್ಥಳಕ್ಕಾಗಿ ಮತ್ತು ಸಂಗಾತಿಗಾಗಿ ಕದನವೂ ನಡೆಯುತ್ತದೆ. ನಂತರ ಹೆಣ್ಣು ಏಡಿಗಳು ಬಿಲವನ್ನು ತಲುಪಿ ಸಂತಾನಾಭಿವೃದ್ಧಿಗೆ ತಯಾರಾಗುತ್ತವೆ. ಒಂದೆರಡು ದಿನಗಳ ನಂತರ ಗಂಡು ಏಡಿಗಳು ಬಿಲದಿಂದ ಹೊರಗೆ ಬಂದು ಸಮುದ್ರಕ್ಕೆ ಹೋಗಿ ಸ್ನಾನ ಮಾಡಿ, ನಂತರ ಅರಣ್ಯ ಪ್ರದೇಶದ ಕಡೆಗೆ ಹೊರಡುತ್ತವೆ. ಇಲ್ಲಿ ಏಡಿಗಳ ಸ್ನಾನ ಎಂದರೆ ನೀರಿನಿಂದ ಆಮ್ಲಜನಕವನ್ನು ತೆಗೆದುಕೊಳ್ಳುವ ಕ್ರಿಯೆ. ಆಮೇಲೆ ಹೆಣ್ಣು ಏಡಿಗಳು ತಾವಿರುವ ಬಿಲದ ಬಾಯಿಯನ್ನು ಒಳಗಿನಿಂದ ಹಗುರವಾದ ವಸ್ತುಗಳಿಂದ ಮುಚ್ಚುತ್ತವೆ. ಬಿಲದ ಒಳಗೆ ಹವೆ ಒಣಗದೇ ಇರಲಿ ಎನ್ನುವ ಲೆಕ್ಕಾಚಾರ. ಮೂರು ದಿವಸಗಳ ನಂತರ ಮೊಟ್ಟೆಯನ್ನು ಮಾಡಿಕೊಂಡು, ತಮ್ಮ ಹೊಟ್ಟೆಯ ಒಳಗಿನ ಕವಚದಲ್ಲಿ ಅಂದಾಜು ಹನ್ನೆರಡು ದಿವಸಗಳವರೆಗೆ ಇಟ್ಟುಕೊಳ್ಳುತ್ತವೆ. ಪ್ರತಿಯೊಂದು ಹೆಣ್ಣು ಅಂದಾಜು ಎರಡು ಸಾವಿರದಿಂದ ಒಂದು ಲಕ್ಷದವರೆಗೆ ಮೊಟ್ಟೆಗಳನ್ನು ಉತ್ಪತ್ತಿ ಮಾಡುತ್ತದೆ. ಹುಣ್ಣಿಮೆ ಮುಗಿದು ಒಂದು ವಾರದ ನಂತರದ ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ತಮ್ಮ ಬಿಲದಿಂದ ಹೊರಗೆ ಬಂದು ಸಮುದ್ರದ ನೀರಿನ ಮೇಲೆ ನೆರಳಿರುವ ಜಾಗದಲ್ಲಿ ಅಲೆಗಳ ಉಬ್ಬರ ಮತ್ತು ಇಳಿತದ ಮಧ್ಯದ ಸಮಯವನ್ನು ನೋಡಿಕೊಂಡು, ಮೊಟ್ಟೆಗಳನ್ನು ನೀರಿಗೆ ಬಿಡುತ್ತವೆ. ಎರಡು ದಿನಗಳ ನಂತರ ಸಮುದ್ರದಲ್ಲಿ ಮಿಂದು ಅರಣ್ಯ ಪ್ರದೇಶದ ಕಡೆಗೆ ಪ್ರಯಾಣ ಬೆಳಸುತ್ತವೆ. ಹವಾಮಾನದ ವೈಪರೀತ್ಯದ ಕಾರಣದಿಂದ, ಸಂತಾನಕ್ರಿಯೆ ಮಾಡಲಾಗದೆ ಇದ್ದರೆ, ಈ ಎಲ್ಲ ಪ್ರಕ್ರಿಯೆಗಳನ್ನು ಮುಂದಿನ ತಿಂಗಳಿಗೆ ಮುಂದೂಡಲಾಗುತ್ತದೆ.

    ಸಣ್ಣ ದ್ವೀಪದ ಕೆಂಪು ಏಡಿಗಳ ಕೆಂಪು ನದಿ ಕಂಡರೆ ನೀವೂ ಗಾಬರಿಯಾಗುತ್ತೀರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts