ದೇಶದ ಪ್ರಗತಿಗೆ ಸ್ತ್ರೀಯರ ಕೊಡುಗೆ ಅಪಾರ

bhagina
ಶಿವಮೊಗ್ಗದಲ್ಲಿ ಮಹಿಳೆಯರಿಗೆ ಬಾಗಿನ ವಿತರಣೆ ಕಾರ್ಯಕ್ರಮವನ್ನು ಬಲ್ಕಿಷ್ ಬಾನು ಉದ್ಘಾಟಿಸಿದರು. ನಾಜೀಮಾ, ಬಿ.ಎ.ಸುರೇಶ್ ಶೆಟ್ಟಿ, ಅಕ್ಕಮ್ಮ, ದೇವರಾಜ್, ಪ್ರೇಮಾ ಶೆಟ್ಟಿ ಇತರರಿದ್ದರು.
Published on

ಶಿವಮೊಗ್ಗ: ಮಹಿಳೆಯರು ಈಗ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ದೇಶದ ಪ್ರಗತಿಗೆ ಸ್ತ್ರೀಯರ ಕೊಡುಗೆ ಅಪಾರ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಹೇಳಿದರು.

ಶ್ರಾವಣದ ಅಂಗವಾಗಿ ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕದಿಂದ 100 ಮಹಿಳೆಯರಿಗೆ ಬಾಗಿನ ನೀಡುವ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ಶೋಷಣೆ ತಪ್ಪಬೇಕು. ಇದೇ ಕಾರಣದಿಂದ ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಕೆಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎ.ಸುರೇಶ್ ಶೆಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಜೀಮಾ, ತಾಲೂಕು ಅಧ್ಯಕ್ಷೆ ಅಕ್ಕಮ್ಮ, ಪ್ರಮುಖರಾದ ರೇಖಾ, ಪರಶುರಾಮ್, ಮೋಹನ್, ದೇವರಾಜ್, ಪ್ರೇಮಾ ಎನ್. ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net