ಇಂಜಿನಿಯರ್‌ಗಳ ಕೊಡುಗೆ ಬಹುಮುಖ್ಯ

engineers
ಶಿವಮೊಗ್ಗದ ಸಮಸ್ತ ಇಂಜಿನಿಯರಿಂಗ್ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಇಂಜಿನಿಯರ್ಸ್‌ ಡೇ ಕಾರ್ಯಕ್ರಮದಲ್ಲಿ ಕೆ.ಜಯಪ್ರಕಾಶ್, ಸತೀಶ್, ಬಿ.ವಿ.ಜಗದೀಶ್, ಎಸ್.ಗಣೇಶ್, ಪ್ರಶಾಂತ್, ನಟರಾಜ್ ಎಸ್.ಪಾಟೀಲ್ ಮುಂತಾದವರು ಭಾಗವಹಿಸಿದ್ದರು.
Published on

ಶಿವಮೊಗ್ಗ: ಸದಾ ವಿಶ್ಲೇಷಿಸಿ ಭವಿಷ್ಯವನ್ನು ಅವಲೋಕಿಸಿ ಕೆಲಸಗಳನ್ನು ವಿನ್ಯಾಸ ಮಾಡುವಂತವರು ಇಂಜಿನಿಯರ್‌ಗಳು. ಇಂತಹ ಇಂಜನಿಯರ್‌ಗಳು ಸಮಾಜಕ್ಕೆ ನೀಡುವ ಕೊಡುಗೆಗಳು ಬಹುಮುಖ್ಯವಾಗಿರುತ್ತವೆ ಎಂದು ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕೆ.ಜಯಪ್ರಕಾಶ್ ಹೇಳಿದರು.

ನಗರದ ಸಮಸ್ತ ಸರ್ಕಾರಿ ಇಂಜಿನಿಯರಿಂಗ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿಯಂತರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂಜಿನಿಯರ್‌ಗಳು ದೂರದೃಷ್ಟಿ ಹಾಗೂ ಜನರ ತುರ್ತು ಕೆಲಸಗಳಿಗೆ ಮಿಡಿಯುವ ಹೃದಯ ಹೊಂದಿರಬೇಕು ಎಂದರು.

ಗ್ರಾಮೀಣ ಭಾಗದ ಹಿನ್ನೆಲೆಯುಳ್ಳ ಅಧಿಕಾರಿಗಳು ಹಳ್ಳಿಗಳಿಗೆ ಅವಶ್ಯವಿರುವ ಕೆಲಸಗಳನ್ನು ಅಧ್ಯಯನ ಮಾಡಿ ಅವಲೋಕಿಸಬೇಕು. ಅವಕಾಶ ಸಿಕ್ಕಾಗ ಅದನ್ನು ಅನುಷ್ಠಾನ ಮಾಡಬೇಕು. ಇಂಜಿನಿಯರ್‌ಗಳು ನಿರ್ಮಾಣ ಮಾಡುವಂತಹ ಡ್ಯಾಂಗಳು, ರಾಷ್ಟ್ರೀಯ ಹೆದ್ದಾರಿಗಳು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಬೇಕು ಎಂದು ಹೇಳಿದರು.

ಸರ್ ಎಂ.ವಿ ಜನ್ಮದಿನ ಆಚರಿಸುವುದು ಎಲ್ಲ ಇಂಜಿನಿಯರ್ಸ್‌ಗಳ ಕರ್ತವ್ಯ ಹಾಗೂ ಜವಾಬ್ದಾರಿ. ಸರ್‌ಎಂವಿ ನೀಡಿರುವ ಕೊಡುಗೆ ಅಪಾರ. ಭವ್ಯ ಭಾರತದ ಕನಸು ಕಂಡ ಸರಳ ವ್ಯಕ್ತಿತ್ವ ಅವರದ್ದು ಎಂದು ಬಣ್ಣಿಸಿದರು.

ಭದ್ರಾ ಕಾಡಾ ಆಡಳಿತಾಧಿಕಾರಿ ಸತೀಶ್, ಡಾ.ಶಿವಕುಮಾರ್, ಮುಖ್ಯ ಇಂಜಿನಿಯರ್ ಬಿ.ವಿ.ಜಗದೀಶ್, ಅಧೀಕ್ಷಕ ಇಂಜಿನಿಯರ್ ಎಸ್.ಗಣೇಶ್, ನಟರಾಜ್ ಎಸ್.ಪಾಟೀಲ್, ಪ್ರಶಾಂತ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net