ಹಿರಿಯರ ಮೌಲ್ಯಗಳಿಗೆ ಸಂವಿಧಾನ ಭದ್ರ ಅಡಿಪಾಯ

15sri-1
ಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಟಿ.ಡಿ.ರಾಜೇಗೌಡ, ಗೌರಮ್ಮ, ವಿಜಯ್‌ಕುಮಾರ್,ಪ್ರಶಾಂತ್. ಕೆ.ಆರ್.ವೆಂಕಟೇಶ್,ನಟರಾಜ್ ಇದ್ದರು.
Published on

ಶೃಂಗೇರಿ: ಸ್ವಾತಂತ್ರೃದ ನಂತರ ದೇಶ ಸಮೃದ್ಧವಾಗಿ ಬೆಳೆಯಲು ಹಿರಿಯರು ನೀಡಿದ ಮೌಲ್ಯಗಳಿಗೆ ಸಂವಿಧಾನದ ಆಶಯಗಳು ಭದ್ರಪಾಯ ಅಡಿಪಾಯ ಹಾಕಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜೆಸಿಬಿಎಂ ಕಾಲೇಜಿನಲ್ಲಿ ತಾಲೂಕು ಆಡಳಿತ,ತಾಪಂ, ಸಮಾಜ ಕಲ್ಯಾಣ ಇಲಾಖೆ, ಜೆಸಿಬಿಎಂ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಮ್ಮದು ವೈವಿಧ್ಯಮಯದೇಶ. ನಾನಾ ಪ್ರಾಂತ್ಯಗಳಲ್ಲಿ ವಾಸವಾಗಿರುವ ಜನರ ಸಂಪ್ರದಾಯಗಳು ವಿಭಿನ್ನವಾಗಿದ್ದರೂ ಜಾತಿ, ಮತ, ಪಂಥಗಳನ್ನು ಒಗ್ಗೂಡಿಸಿ ಏಕತೆ ಸಾರಿದ ಭಾರತದ ಇತಿಹಾಸಕ್ಕೆ ತನ್ನದೇ ಆದ ಶ್ರೇಷ್ಠತೆ ಇದೆ. ದೇಶದಲ್ಲಿ ಅಸಮಾನತೆ ನಿವಾರಿಸಿ ಸಮಾನತೆ, ಮಾನವ ಹಕ್ಕುಗಳ ಸಂರಕ್ಷಿಸುವುದು ಸಂವಿಧಾನದ ಮೂಲ ಉದ್ದೇಶ ಎಂದರು.
ಸಂವಿಧಾನ ಸರ್ವರನ್ನೂ ತಲುಪಬೇಕು ಎಂದು ರಾಜ್ಯ ಸರ್ಕಾರದ ಶಾಲಾ-ಕಾಲೇಜು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಿದೆ. ಡಾ.ಅಂಬೇಡ್ಕರ್ ಅವರ ಮೂಲ ಸಿದ್ಧಾಂತದಂತೆ ದೇಶದಲ್ಲಿ ಪ್ರಜಾಪ್ರಭುತ್ವ ವಿದೆ. ಪ್ರಜೆಗಳೇ ಪ್ರಭುಗಳು. ಅವರಿಗೆ ಸಾಮಾಜಿಕ ನ್ಯಾಯ, ಪ್ರೀತಿ, ವಿಶ್ವಾಸ ನೀಡುವುದು ಸರ್ವರ ಕರ್ತವ್ಯ. ಎಂದರು.
ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್, ಅಧಿಕಾರಿ ಮಂಜುನಾಥ್, ತಹಸೀಲ್ದಾರ್ ಗೌರಮ್ಮ, ಕ್ಷೇತ್ರಶಿಕ್ಷಣಾಧಿಕಾರಿ ಎನ್.ಜಿ.ರಾಘವೇಂದ್ರ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸಂದೀಪ್,ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಪಪಂ ಸದಸ್ಯ ರಫೀಕ್ ಅಹಮದ್, ಪ್ರಾಚಾರ್ಯ ಡಾ.ಎಂ.ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net