ಚಿಕ್ಕಪ್ಪ ವಿರುದ್ಧವೇ ದೂರು ದಾಖಲಿಸಿದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ

rape-cartoon
ಸಾಂದರ್ಭಿಕ ಚಿತ್ರ
Published on

ಲಕ್ನೋ: ಸರ್ಕಾರ ಮತ್ತು ಎನ್‌ಜಿಒಗಳಿಂದ ನೀಡಿದ್ದ ಹಣವನ್ನು ಕುಟುಂಬದವರು ನನ್ನಿಂದ ಕಿತ್ತುಕೊಂಡು ಮನೆಯಿಂದ ಹೊರಹಾಕಿದ್ದಾರೆ ಎಂದು ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಆರೋಪಿಸಿದ್ದು, ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ವಿಜಯಾನಂದ ಕಾಶಪ್ಪನವರ್ ವಿರುದ್ಧ ದೊಡ್ಡನಗೌಡ ಪಾಟೀಲ್ ಕಿಡಿ

2019ರಲ್ಲಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಈ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಆಕೆ ಕೊಟ್ಟ ದೂರಿನ ಮೇರೆಗೆ ಮಾಖಿ ಪೊಲೀಸ್ ಠಾಣೆಯಲ್ಲಿ ಆಕೆಯ ಚಿಕ್ಕಪ್ಪ, ತಾಯಿ, ಸಹೋದರಿ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 406 ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಲಾಗಿದೆ ಎಂದು ಎಎಸ್‌ಪಿ ಶಶಿ ಶೇಖರ್ ಸಿಂಗ್ ತಿಳಿಸಿದ್ದಾರೆ.

'ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರ ಮತ್ತು ಎನ್‌ಜಿಒಗಳು ನನಗೆ ಹಣ ನೀಡಿದ್ದವು. ನನ್ನ ಖರ್ಚಿಗೆ ಕೇಳಿದಾಗ, ಪ್ರಕರಣಕ್ಕೆ 7 ಕೋಟಿ ರೂ.ಖರ್ಚು ಮಾಡಲಾಗಿದ್ದು, ಬಂದಿರುವ ಹಣ ಸಾಕಾಗುವುದಿಲ್ಲ ಎಂದು ನನ್ನ ಚಿಕ್ಕಪ್ಪ ಹೇಳಿದರು' ಎಂದು ಅವರು ಆರೋಪಿಸಿದರು.

ಇನ್ನು `ನನ್ನ ಆಕೆಯ ಚಿಕ್ಕಪ್ಪ ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ಅನುಭವಿಸಿದ್ದಾರೆ. ಅವರ ಸೂಚನೆ ಮೇರೆಗೆ ನನ್ನ ತಾಯಿ ಮತ್ತು ಸಹೋದರಿ ನನ್ನ ಮತ್ತು ನನ್ನ ಗಂಡನ ಜೀವನಕ್ಕೆ ಶತ್ರುಗಳಾಗಿದ್ದಾರೆ. ಸರ್ಕಾರದಿಂದ ಪಡೆದ ಮನೆಯಿಂದ ನಾನು ಮತ್ತು ತನ್ನ ಪತಿಯನ್ನು ಹೊರಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ಶಿಕ್ಷೆಯಾಗುವಲ್ಲಿ ಸಂತ್ರಸ್ತೆಯ ಚಿಕ್ಕಪ್ಪ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ, ಜೈಲಿನಲ್ಲಿರುವ ತನ್ನ ಚಿಕ್ಕಪ್ಪನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net