ತಮಿಳುನಾಡು ಸಿಎಂಗೆ ಕರೆ ಮಾಡ್ತಿರಾ ಅಂದ್ರೆ ಪ್ರಯೋಜನವಿಲ್ಲವೆಂದ್ರು ಸಿದ್ದರಾಮಯ್ಯ!

Siddaramaiah
Published on

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಕಟ್ಟಿಕೊಂಡ ಐನ್​ಡಿಐಎ ಒಕ್ಕೂಟದ ಭಾಗವಾಗಿರುವ ಡಿಎಂಕೆ ತಮಿಳುನಾಡಿನಲ್ಲಿ ಆಡಳಿತಾರೂಢ ಪಕ್ಷ. ಕಾವೇರಿ ವಿಷಯದಲ್ಲಿ ಈ ರಾಜಕೀಯ ಸ್ನೇಹಿತನ ಜತೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತುಕತೆ ನಡೆಸಬಾರದೆಂಬುದು ಬಿಜೆಪಿ ಸಲಹೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇಂತಹದ್ದೊಂದು ಒತ್ತಾಯವನ್ನೂ ಮಾಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಈ ಆಗ್ರಹಕ್ಕೆ ವ್ಯತಿರಿಕ್ತ ಅಭಿಪ್ರಾಯ ನೀಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಯವರು ನಿಮ್ಮ ರಾಜಕೀಯ ಸ್ನೇಹಿತರು, ಈ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿ ಮನವೊಲಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಕಸಿವಿಸಿಗೊಂಡ ಸಿಎಂ ಸಿದ್ದರಾಮಯ್ಯ, ಅವರೊಂದಿಗೆ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ. ಏಕೆ ಮಾತನಾಡಬೇಕು? ನೀರು ಬಿಡಲು ಕೋರ್ಟ್ ಹೇಳಿರುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net