27ರಂದು ಶಿವಮೊಗ್ಗಕ್ಕೆ ಸುತ್ತೂರು ಆದಿ ಜಗದ್ಗುರುಗಳ ರಥ ಆಗಮನ

sutturu matt holaluru ningappa
ಶ್ರೀಮಠದ ಸಂಪರ್ಕ ಪ್ರಮುಖ ಹೊಳಲೂರು ನಿಂಗಪ್ಪ
Published on

ಶಿವಮೊಗ್ಗ: ಸುತ್ತೂರು ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಆದಿ ಜಗದ್ಗುರುಗಳ ಉತ್ಸವ ಮೂರ್ತಿ ಪ್ರತಿಷ್ಠಾಪನೆಗೊಂಡಿರುವ ಪ್ರಚಾರದ ರಥಯಾತ್ರೆ ಡಿ.27ರಂದು ಸಂಜೆ 4ಕ್ಕೆ ಶಿವಮೊಗ್ಗ ನಗರಕ್ಕೆ ಆಗಮಿಸಲಿದೆ ಎಂದು ಶ್ರೀಮಠದ ಸಂಪರ್ಕ ಪ್ರಮುಖ ಹೊಳಲೂರು ನಿಂಗಪ್ಪ ಹೇಳಿದರು.

ಮಲವಗೊಪ್ಪದ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಬಳಿ ಮಂಗಳವಾದ್ಯಗಳೊಂದಿಗೆ ಯಾತ್ರೆಯನ್ನು ಸ್ವಾಗತಿಸಲಾಗುವುದು. ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರು, ಎಂಎಲ್‌ಸಿಗಳು, ಅಧಿಕಾರಿಗಳು, ಭಕ್ತರು ಉಪಸ್ಥಿತರಿರುವರು. 2025ರ ಜ.26ರಿಂದ 31ರವರೆಗೆ ಶ್ರೀ ಸುತ್ತೂರು ಮಠದಲ್ಲಿ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಶಿವಮೊಗ್ಗದಲ್ಲಿ ಎರಡು ದಿನ ರಥಯಾತ್ರೆ ಇರಲಿದ್ದು ನಂತರ ಚಿಕ್ಕಮಗಳೂರಿಗೆ ತೆರಳಲಿದೆ ಎಂದರು.

ಜ.26ರಂದು ಉತ್ಸವ ಮೂರ್ತಿ ಗದ್ದುಗೆಗೆ ವಿಜಯಂಗೈಸುವುದು, 27ರಂದು ಹಾಲ್ಹರವಿ ಉತ್ಸವ, ಶ್ರೀ ಸೋಮೇಶ್ವರಸ್ವಾಮಿ ಕುಂಭಾಭಿಷೇಕ, ಸಾಮೂಹಿಕ ವಿವಾಹ, 28ರಂದು ರಥೋತ್ಸವ, ಶ್ರೀ ವೀರಭದ್ರೇಶ್ವರ ಕೊಂಡೊತ್ಸವ, 29ರಂದು ಶ್ರೀ ಮಹದೇಶ್ವರ ಕೊಂಡೊತ್ಸವ, ಲಕ್ಷದೀಪೋತ್ಸವ, ಶ್ರೀ ಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, 30ರಂದು ತೆಪ್ಪೋತ್ಸವ ಹಾಗೂ 31ರಂದು ಅನ್ನಬ್ರಹ್ಮೋತ್ಸವ ಇರಲಿದೆ ಎಂದರು. ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಮಂಜು ಕರ್ನಳ್ಳಿ, ಹರ್ಷ ಕಾಮತ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net