ಮಾವು ಬೆಳೆಗಾರರ ನೆರವಿಗೆ ಕೇಂದ್ರ ಧಾವಿಸಲಿ: ಸಿಎಂ | Price deficiency

Siddaramaiah
Published on

ಬೆಂಗಳೂರು: ಮಾವು ಗುಣಮಟ್ಟ, ಇಳುವರಿ ಉತ್ತಮವಾಗಿದೆ ಎಂದು ಖುಷಿಪಟ್ಟಿದ್ದ ಮಾವು ಬೆಳೆಗಾರರಿಗೆ ಆಘಾತವಾಗಿದೆ. ಸಲು ಮಾರಾಟಕ್ಕೆ ತರುವ ಹೊತ್ತಿನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಹಠಾತ್ ದರ ಕುಸಿದು, ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಂಡು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬರೆದ ಪತ್ರದಲ್ಲಿ ಮಾರುಕಟ್ಟೆಯಲ್ಲಿ ದರ ಇಳಿಕೆ, ಮಾವು ಬೆಳೆಗಾರರ ಬದುಕು-ಬವಣೆಯ ಚಿತ್ರಣ ಕಟ್ಟಿಕೊಟ್ಟಿದ್ದಾರೆ.

ದರ ಕೊರತೆ ಭರ್ತಿ

ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಯೋಜನೆಯಡಿ ದರ ಕೊರತೆ ಪಾವತಿ ಕಾರ್ಯಕ್ರಮವನ್ನು ತುರ್ತಾಗಿ ಅನುಷ್ಠಾನಗೊಳಿಸಿ, ಕೇಂದ್ರದ ಸಂಸ್ಥೆಗಳಾದ ನಾೆಡ್ ಮತ್ತು ಎನ್‌ಸಿಸಿಎ್ಗೆ ಮಾವು ಖರೀದಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.

ಸೂಕ್ತವಾದ ಬೆಂಬಲ ಬೆಲೆಯಲ್ಲಿ ಖರೀದಿಸುವ ಮೂಲಕ ಮಾವು ಬೆಳೆಯಲು ರೈತರು ಹೂಡಿದ ಬಂಡವಾಳ, ದುಡಿಮೆ ಕೂಲಿ ಮೊತ್ತವಾದರೂ ಅವರ ಕೈಗೆ ಸೇರುವಂತಾದರೆ, ಬಹುದೊಡ್ಡ ನಷ್ಟದ ಹೊರೆಯಿಂದ ಪಾರು ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ಆವಕ ಹೆಚ್ಚಳ, ಬೆಲೆ ಇಳಿಕೆ

ಕರ್ನಾಟಕದ ಬೆಂಗಳೂರು ನಗರ, ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ತೋಟಗಾರಿಕೆ ಬೆಳೆಗಳಲ್ಲಿ ಮಾವು ಮುಖ್ಯ ಬೆಳೆಯಾಗಿದೆ. ಅಂದಾಜು 1.39 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದು, ಮುಂಗಾರು ಹಂಗಾಮಿಗೆ 8-10 ಲಕ್ಷ ಟನ್ ಉತ್ಪಾದನೆಯಾಗಲಿದೆ.

ಮಾವು ಕುಯ್ಲು ಮೇ ಯಿಂದ ಜುಲೈವರೆಗೆ ಗರಿಷ್ಠಮಟ್ಟಕ್ಕೆ ತಲುಪುತ್ತದೆ. ಬೆಳೆದ ಮಾವು ಮಾರಾಟಕ್ಕೆ ರೈತರು ಮಾರುಕಟ್ಟೆಗೆ ತರಲಾರಂಭಿಸಿದ್ದಾರೆ. ಆವಕ ಏರಿಕೆಯಾಗುತ್ತಿದ್ದಂತೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಇಳಿಯಲಾರಂಭಿಸಿದೆ.

ಪ್ರತಿ ಕ್ವಿಂಟಾಲ್‌ಗೆ 12 ಸಾವಿರ ರೂ.ಗಳಿದ್ದದ್ದು ಮೂರು ಸಾವಿರ ರೂ.ಗೆ ಇಳಿದಿದೆ. ಕೃಷಿ ಬೆಲೆ ಆಯೋಗದ ಶಿಾರಸಿನ ಪ್ರಕಾರ ಮಾವು ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್‌ಗೆ 5,466 ರೂ.ಗಳಾಗಲಿದೆ.

ದಿಢೀರ್ ಬೆಲೆ ಕುಸಿತದಿಂದ ಕಂಗೆಟ್ಟಿರುವ ಸಾವಿರಾರು ಸಣ್ಣ ಹಾಗೂ ಅತಿಸಣ್ಣ ರೈತರು ಬೆಂಬಲ ಬೆಲೆಗೆ ಒತ್ತಾಯಿಸಿ ಬೀದಿಗೆ ಇಳಿದಿದ್ದಾರೆ. ಮಾವು ಬೆಲೆ ಬಿಕ್ಕಟ್ಟು ಬಗೆಹರಿಯದಿದ್ದರೆ ಈ ಪ್ರದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಕೇಂದ್ರ ಕೃಷಿ ಸಚಿವರಿಗೆ ಬರೆದ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಗಮನಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net