ಮಂಜುಮ್ಮೇಲ್​​ ಬಾಯ್ಸ್ ಚಿತ್ರದ ಗುಣ ಗುಹೆಗಿಂತಲೂ ಡೇಂಜರ್ ಈ ಗುಹೆ! ಒಳಗೆ ಹೋದ್ರೆ ಸಾವು ಫಿಕ್ಸ್​, ವಿಡಿಯೋ ವೈರಲ್​ | Cave Of Death

Cave Of Death
Published on

Cave of Death: ತಮಿಳುನಾಡಿನ ಕೊಡೈಕೆನಾಲ್​ನಲ್ಲಿರುವ ಡೆವಿಲ್ಸ್ ಕಿಚನ್ ಎಂದೂ ಕರೆಯಲ್ಪಡುವ ಗುಣ ಗುಹೆ ಮಂಜುಮ್ಮೆಲ್​ ಬಾಯ್ಸ್ ಸಿನಿಮಾ ಮೂಲಕ ತುಂಬಾ ಪ್ರಸಿದ್ಧಿಯಾಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾ ನೋಡಿದ ಮೇಲಂತೂ ಗುಹೆ ಎಂಬ ಪದ ಕೇಳಿದರೆ ಅನೇಕ ಜನರು ಭಯಪಡುತ್ತಾರೆ. ಅದರಲ್ಲೂ ಗುಣ ಗುಹೆಯ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಆದರೆ, ಗುಣ ಗುಹೆಗಿಂತಲೂ ಅಪಾಯಕಾರಿ ಗುಹೆ ಒಂದಿದೆ. ಜಗತ್ತಿನ ಅತ್ಯಂತ ಅಪಾಯಕಾರಿ ಗುಹೆ ಎನಿಸಿಕೊಂಡಿದೆ. ಅದುವೇ 'ಕ್ಯೂವಾ ಡೆ ಲಾ ಮುರ್ಟೆ'. ಇದನ್ನು ಸಾವಿನ ಗುಹೆ ಎಂದೂ ಕರೆಯುತ್ತಾರೆ.

ಈ ಸಾವಿನ ಗುಹೆಯು ಕೋಸ್ಟಾರಿಕಾದ ಪೋಯಾಸ್ ಜ್ವಾಲಾಮುಖಿಯ ಬಳಿಯಿದೆ. ಇದು ಪ್ರವಾಸಿಗರ ಆಕರ್ಷಣೆಯಾಗಿದೆ. ದೊಡ್ಡ ಬಂಡೆಯ ಕೆಳಗಿರುವ ಗುಹೆಯ ಪ್ರವೇಶದ್ವಾರದ ಸುತ್ತಲೂ ಎಲೆಗಳು ಹರಡಿಕೊಂಡಿವೆ. ಗುಹೆಯ ಮುಂದೆ ಜನರು ಪ್ರವೇಶಿಸದಂತೆ ಎಚ್ಚರಿಕೆ ನೀಡುವ ಫಲಕವನ್ನೂ ಹಾಕಲಾಗಿದೆ. ಅಷ್ಟಕ್ಕೂ ಈ ಗುಹೆ ತುಂಬಾ ಅಪಾಯಕಾರಿ ಯಾಕೆ?

ಆರು ಅಡಿ ಆಳ ಮತ್ತು ಹತ್ತು ಅಡಿ ಉದ್ದವಿರುವ ಈ ಗುಹೆಯಲ್ಲಿ ಯಾವುದೇ ಪ್ರಾಣಿಗಳು, ವಿಷಕಾರಿ ಸಸ್ಯಗಳು, ಹಾವುಗಳು ಅಥವಾ ಜೇಡಗಳಿಲ್ಲ. ಆದರೆ ಒಮ್ಮೆ ನೀವು ಗುಹೆಯನ್ನು ಪ್ರವೇಶಿಸಿದರೆ ಹಿಂತಿರುಗಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಏಕೆಂದರೆ ಈ ಗುಹೆಯಲ್ಲಿ ಒಂದು ಲೋಟ ಆಮ್ಲಜನಕವೂ ಇಲ್ಲ. ಬದಲಾಗಿ ಈ ಗುಹೆಯಲ್ಲಿ ಕಾರ್ಬನ್ ಡೈಆಕ್ಸೈಡ್ ತುಂಬಿದೆ.

ಈ ಗುಹೆಯೊಳಗೆ ಇಳಿದರೆ ಉಸಿರುಗಟ್ಟಿದ ಅನುಭವವಾಗುತ್ತದೆ. ಹೃದಯದ ಬಡಿತವು ನಿಲ್ಲುತ್ತದೆ ಮತ್ತು ಮೂರ್ಛೆ ಹೋಗುತ್ತಾರೆ. ಹೀಗಾಗಿ ಸಾವು ಸಂಭವಿಸುತ್ತದೆ. ಯೂಟ್ಯೂಬರ್ ಮತ್ತು ಪರಿಶೋಧಕ ಗೈ ವ್ಯಾನ್ ರೆಂಟರ್ಜೆಮ್, ಗುಹೆಯು ಗಂಟೆಗೆ 30 ಕೆಜಿ ಕಾರ್ಬನ್​ ಡೈಯಾಕ್ಸೈಡ್​ ಅನ್ನು ಹೊರಸೂಸುತ್ತದೆ ಎಂದು ಹೇಳಿದ್ದಾರೆ.

ಬೆಂಕಿ ಉರಿಯಲು ಆಮ್ಲಜನಕದ ಅಗತ್ಯವಿದೆ ಮತ್ತು ಆಮ್ಲಜನಕದ ಕೊರತೆಯು ಕೆಲವೇ ಸೆಕೆಂಡಿನಲ್ಲಿ ಬೆಂಕಿಯನ್ನು ನಂದಿಸುತ್ತದೆ. ಇದನ್ನು ವ್ಯಾನ್ ರೆಂಟರ್ಜೆಮ್ ಅವರ ವಿಡಿಯೋದಲ್ಲಿ ನೋಡಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net