ಠಾಣೆ ಮೆಟ್ಟಿಲೇರಿದ ಪಕ್ಕದ ಮನೆ ದಂಪತಿ ಸರಸ ಸಲ್ಲಾಪದ ಪ್ರಕರಣ!

Crime Logo
Published on

ಬೆಂಗಳೂರು: ವಿಚಿತ್ರ ಪ್ರಕರಣವೊಂದು ಗಿರಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮಹಿಳೆಯೊಬ್ಬರು ದಂಪತಿ ಮತ್ತು ಆತನ ಮನೆ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಪಕ್ಕದ ಮನೆಯಲ್ಲಿ ಬಾಡಿಗೆಗೆ ಇರುವ ದಂಪತಿ ಲೈಂಗಿಕ ಕ್ರಿಯೆ ಮಾಡುವಾಗ ಕಿಟಕಿ ಬಾಗಿಲು ತೆರೆದು ವಿಕೃತ ವರ್ತನೆ ಮಾಡುತ್ತಿದ್ದಾರೆ. ದಂಪತಿ ವರ್ತನೆಯಿಂದ ನಮ್ಮ ಕುಟುಂಬಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎಂದು ಆರೋಪಿಸಿರುವ ಪಕ್ಕದ ಮನೆಯ ಮಾಲೀಕರಾದ ಮಹಿಳೆ ಠಾಣೆಗೆ ದೂರು ನೀಡಿದ್ದಾರೆ.
ಆವಲಹಳ್ಳಿ ಬಿಡಿಎ ಲೇಔಟ್‌ನ ನಿವಾಸಿಯಾದ ೪೪ ವರ್ಷದ ಮಹಿಳೆ ತನ್ನ ದೂರಿನಲ್ಲಿ ಮಾ.೭ ರಂದು ರಾತ್ರಿ ೧೦.೩೦ ಗಂಟೆಯಲ್ಲಿ ನಮ್ಮ ಪಕ್ಕದ ಮನೆ ಎರಡನೇ ಮಹಡಿಯಲ್ಲಿ ಬಾಡಿಗೆಗೆ ಇರುವಂತಹ ವ್ಯಕ್ತಿ ನಮ್ಮ ಮನೆಯ ಬಾಗಿಲಿಗೆ ಅವರ ಬೆಡ್ ರೂಮ್ ಇದ್ದು, ತಮ್ಮ ಬೆಡ್ ರೂಮ್ ಕಿಟಕಿ ತೆರೆದು ತಮ್ಮ ಪತ್ನಿಯ ಜತೆ ಲೈಂಗಿಕ ಕ್ರಿಯೆಯನ್ನು ಮಾಡುವ ಮೂಲಕ ಬಹಳ ವಿಕೃತ ಮತ್ತು ಅಸಹ್ಯ ಮನಸ್ಥಿತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಬಹಳ ಮುಜುಗರಕ್ಕೆ ಒಳಗಾದ ನಾನು ದಯವಿಟ್ಟು ತಮ್ಮ ಬೆಡ್ ರೂಮ್ ಕಿಟಿಕಿ ಹಾಕಿಕೊಳ್ಳುವಂತೆ ಮನವಿ ಮಾಡಿದ್ದೆ. ಇದಕ್ಕೆ ಆತ ಬಹಳ ಹೀನಾಯ ರೀತಿಯ ಅವಾಚ್ಯ ಶಬ್ಧಗಳಿಂದ ನನ್ನ ಹಾಗೂ ಕುಟುಂಬ ಸದಸ್ಯರಿಗೆ ಬೈದು ನಿಂದಿಸಿದಲ್ಲದೇ, ನನ್ನ ಮೇಲೆ ಅತ್ಯಾಚಾರ ಎಸಗುವುದಾಗಿ ಮತ್ತು ಹಲ್ಲೆ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಅವರ ಜತೆ ಮನೆ ಮಾಲೀಕ ಮತ್ತು ಆತನ ಮಗ ಕೂಡ ಜತೆಗೂಡಿ ನನ್ನ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ್ದು, ಅವರು ಕೆಲವು ಯುವಕರನ್ನು ಕರೆಸಿದ್ದು ಅವರೆಲ್ಲರು ತುಂಬಾ ಅವಾಚ್ಯ ಶಬ್ಧಗಳಿಂದ ನಿಂದಿಸಿ ನಮಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಇವರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಎಂದು ಮಹಿಳೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಬಾಡಿಗೆ ಮನೆಯವರೊಂದಿಗೆ ಕಿರಿಕ್:
ಮಹಿಳೆ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ದೂರುದಾರರು ಇರುವ ಜಾಗ ತುಂಬಾ ಇಕ್ಕಟಾದ ಪ್ರದೇಶವಾಗಿದ್ದು, ಇವರ ಮನೆಯಲ್ಲಿ ಮಾತನಾಡುವುದು ಅವರ ಮನೆಗೆ ಕೇಳಿಸುತ್ತದೆ. ಅವರ ಮನೆಯಲ್ಲಿ ಮಾತನಾಡಿದ್ದಾಗ ಇವರಿಗೆ ಕೇಳಿಸುತ್ತದೆ. ಹೀಗಾಗಿ ಅವರ ಮಧ್ಯ ಮನಸ್ತಾಪವಾಗಿರುವ ಸಾಧ್ಯತೆ ಇದೆ. ದೂರುದಾರರಿಗೂ ಹಾಗೂ ಪಕ್ಕದ ಮನೆಯ ಬಾಡಿಗೆದಾರರಿಗೂ ಈ ಹಿಂದೆ ಕೆಲವೊಂದು ವಿಚಾರಕ್ಕೆ ಜಗಳವಾಗಿರುವುದು ಗೊತ್ತಾಗಿದೆ. ಪ್ರಾಪರ್ಟಿ ಹಾಗೂ ವೈಯಕ್ತಿಕ ವಿಚಾರಕ್ಕೆ ಈ ರೀತಿ ದೂರು ನೀಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ಬಾಡಿಗೆದಾರನಿಗೆ ಹಾಗೂ ಆತನ ಮನೆ ಮಾಲೀಕನಿಗೆ ನೋಟಿಸ್ ನೀಡಿ ವಿಚಾರಣೆ ಹಾಜರಾಗುವಂತೆ ಸೂಚಿಸಲಾಗಿದೆ. ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net