ಚೆಕ್ ಮೂಲಕ ನಡೆದಿದೆ ಬಂಜಾರ ಸಂಘದ ವ್ಯವಹಾರ

banjara sanga
ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಜಗದೀಶ್, ನಾನ್ಯಾನಾಯ್ಕಾ, ನಾಗೇಶ್‌ನಾಯ್ಕ, ಶಿವಾನಂದ ನಾಯ್ಕ, ಆರ್.ಸಿ.ನಾಯ್ಕ, ಬೋಜ್ಯನಾಯ್ಕ, ಮಂಜುನಾಯ್ಕ, ವಾಸುದೇವ ನಾಯ್ಕ ಇತರರಿದ್ದರು.
Published on

ಶಿವಮೊಗ್ಗ: ಜಿಲ್ಲಾ ಬಂಜಾರ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸುಳ್ಳು ವದಂತಿಗಳಿಗೆ ಬಂಜಾರ ಸಮುದಾಯ ಕಿವಿಗೊಡಬಾರದು ಎಂದು ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಮನವಿ ಮಾಡಿದರು.

ಜಿಲ್ಲಾ ಬಂಜಾರ ಸಂಘವು 48 ವರ್ಷಗಳಿಂದ ಅಸ್ತಿತ್ವದಲ್ಲಿದೆ. ರಾಜ್ಯ ಸರ್ಕಾರ ಬಾಲರಾಜ್ ಅರಸ್ ರಸ್ತೆಯಲ್ಲಿ ನೀಡಿರುವ 20 ಗುಂಟೆ ಜಾಗದಲ್ಲಿ ಬಂಜಾರ ಭವನ ನಿರ್ಮಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2021ರ ನಂತರ ಸಂಘವು ಒಂದೇ ಒಂದು ರೂ. ನಗದು ವ್ಯವಹಾರ ಮಾಡಿರುವುದಿಲ್ಲ. ಎಲ್ಲವೂ ಬ್ಯಾಂಕ್ ಚೆಕ್ ಮೂಲಕವೇ ನಡೆದಿದೆ. ಆದರೆ ಸಮಾಜದ ಕೆಲವರು ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಯಾವುದೇ ಸಮಯದಲ್ಲಿ ಕಚೇರಿಗೆ ಬಂದು ಲೆಕ್ಕಪತ್ರ ಪರಿಶೀಲಿಸಬಹುದು ಎಂದರು.
ಸರ್ಕಾರದಿಂದ 1.50 ಕೋಟಿ ರೂ. ಬಾಕಿ: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಸಂಸದ ಬಿ.ವೈ.ರಾಘವೇಂದ್ರ ಅವರು ಸರ್ಕಾರದ ವಿವಿಧ ಇಲಾಖೆಗಳಿಂದ 10.33 ಕೋಟಿ ರೂ. ಮಂಜೂರು ಮಾಡಿಸಿದ್ದರು. ಇದುವರೆಗೆ 8.83 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 1.50 ಕೋಟಿ ರೂ. ಸರ್ಕಾರದಿಂದ ಬಿಡುಗಡೆ ಬಾಕಿಯಿದೆ ಎಂದು ಅಶೋಕನಾಯ್ಕ ಸ್ಪಷ್ಟಪಡಿಸಿದರು. ಭವನ ನಿರ್ಮಾಣಕ್ಕೆ 11.74 ಕೋಟಿ ರೂ. ವೆಚ್ಚವಾಗಿದೆ. ಸರ್ಕಾರದಿಂದ ಬಿಡುಗಡೆ ಆಗಬೇಕಾದ ಬಾಕಿ ಅನುದಾನ ಹೊರತುಪಡಿಸಿ 1.40 ಕೋಟಿ ರೂ. ಅನ್ನು ಗುತ್ತಿಗೆದಾರರಿಗೆ ನೀಡಬೇಕಿದೆ ಎಂದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಜಗದೀಶ್, ನಾನ್ಯಾನಾಯ್ಕಾ, ನಾಗೇಶ್‌ನಾಯ್ಕ, ಶಿವಾನಂದ ನಾಯ್ಕ, ಆರ್.ಸಿ.ನಾಯ್ಕ, ಬೋಜ್ಯನಾಯ್ಕ, ಮಂಜುನಾಯ್ಕ, ವಾಸುದೇವ ನಾಯ್ಕ ಇತರರಿದ್ದರು.

ಇದುವರೆಗೆ ಶುಭ ಕಾರ್ಯಗಳಿಂದ 1,21,82,401 ರೂ. ಸ್ವೀಕೃತವಾದೆ. ಭವನ ನಿರ್ಮಾಣಕ್ಕೆ ಸಮಾಜ ಗಣ್ಯರಿಂದ 36.12 ಲಕ್ಷ, ತಾಂಡಾಗಳಿಂದ 14.17 ಲಕ್ಷ, ಸದಸ್ಯತ್ವದಿಂದ 2.49 ಲಕ್ಷ ರೂ. ಸೇರಿ ಒಟ್ಟು 1.80 ಕೋಟಿ ರೂ. ಸಂದಾಯವಾಗಿದೆ. ಶುಭ ಕಾರ್ಯಗಳಿಗೆ ಅಗತ್ಯವಿದ್ದ ಪೀಠೋಪಕರಣ, ಜನರೇಟರ್ ಹಾಗೂ ಇತರೆ ಸಾಮಗ್ರಿಗಳಿಗೆ 90 ಲಕ್ಷ ರೂ. ಆಗಿದೆ. 4.51 ಲಕ್ಷ ರೂ. ಉಳಿತಾಯ ಖಾತೆಯಲ್ಲಿದೆ.ಕೆ.ಬಿ.ಅಶೋಕನಾಯ್ಕ, ಬಂಜಾರ ಸಂಘದ ಅಧ್ಯಕ್ಷ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net