ಲಗ್ನ ಪತ್ರಿಕೆ ಹಂಚಲು ಹೋದ ವರ ನಾಪತ್ತೆ; ಮದುವೆ ದಿನ ಮೃತ ದೇಹ ಪತ್ತೆ

telangana
Published on

ತೆಲಂಗಾಣ: ಲಗ್ನ ಪತ್ರಿಕೆ ಹಂಚಲು ಹೋದ ವರ ನಾಪತ್ತೆಯಾಗಿದ್ದು, ಮದುವೆ ದಿನ ಆತನ ಮೃತ ದೇಹ ಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ರಾಜೇಂದರ್ (29) ಮೃತ. ಸದಾಶಿವನಗರ ಮಂಡಲದ ಅಡ್ಲೂರು ಎಲ್ಲರೆಡ್ಡಿ ಗ್ರಾಮದ ನಿವಾಸಿಯಾಗಿದ್ದಾನೆ. ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೆಲ ದಿನಗಳ ಹಿಂದೆ ರಾಂಪುರ ಗ್ರಾಮದ ಯುವತಿಯೊಂದಿಗೆ ರಾಜೇಂದರ್​ನ ಮದುವೆ ನಿಶ್ಚಯವಾಗಿತ್ತು. ಇದೇ 3ರಂದು ಸಂಬಂಧಿಕರಿಗೆ ಮದುವೆ ಕಾರ್ಡ್ ಹಂಚುವ ವೇಳೆ ಮನೆಯಿಂದ ಹೊರ ಹೋದ ರಾಜೇಂದರ್ ಮನೆಗೆ ಬಾರದೆ, ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಎಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮದುವೆಯ ದಿನವಾದ ನಿನ್ನೆ ಲಿಂಗಂಪೇಟ ಮಂಡಲದ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ರಾಜೇಂದರ್ ಶವವನ್ನು ಸಂಬಂಧಿಕರು ಪತ್ತೆ ಮಾಡಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಲಿಂಗಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮದುವೆಯ ದಿನವೇ ವರನ ಸಾವಿನಿಂದ ಕುಟುಂಬಸ್ಥರು ಹಾಗೂ ಊರಿನವರು ದುಃಖತಪ್ತರಾಗಿದ್ದರು. ಆತ್ಮಹತ್ಯೆಯ ಹಿಂದಿನ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಲಿಂಗಂಪೇಟ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net