

Wedding: ಮದುವೆಯ ಸಮಾರಂಭದಲ್ಲಿ ತಾಳಿ ಕಟ್ಟುವ ಸಮಯದ ವೇಳೆ ವರನನ್ನು ನೋಡಿದ ವಧು ''ಇವನು ನಾನು ನೋಡಿದ ವರ ಅಲ್ಲ. ಇವನು ಬೇರೆ ಇದ್ದಾನೆ'' ಎಂದು ಹಸೆಮಣೆಯಿಂದ ಎದ್ದು ಓಡಿದ ಘಟನೆಯೊಂದು ವರದಿಯಾಗಿದೆ.
ಹೌದು, ಉತ್ತರ ಪ್ರದೇಶದ ಭದೋಹಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ವಧು ತಾನು ಈ ಹಿಂದೆ ತೋರಿಸಿದ ವ್ಯಕ್ತಿ ಅಲ್ಲ ಎಂದು ಹೇಳಿಕೊಂಡಿದ್ದರಿಂದ ಎರಡು ಕುಟುಂಬಗಳ ನಡುವೆ ಹಲವು ಗಂಟೆಗಳ ಕಾಲ ಉದ್ವಿಗ್ನ ಚರ್ಚೆಗಳು ನಡೆದವು. ಪರಿಸ್ಥಿತಿಯನ್ನು ಪರಿಹರಿಸಲು ಪ್ರಯತ್ನಿಸಿದರೂ, ಯಾವುದೇ ಪರಿಹಾರ ಸಿಗದೆ ಅಲ್ಲಿಗೆ ಮದುವೆ ಅಂತ್ಯ ಕಂಡಿದೆ.
ಶುಕ್ರವಾರ ಸಂಜೆ(ಏ.25) ವಧುವಿನ ಕುಟುಂಬವು ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಸಂಬಂಧಿಗಳ ಹಾಗೂ ಮದುವೆಗೆ ಆಗಮಿಸುತ್ತಿರುವವರ ಮೇಲೆ ಹೂವುಗಳನ್ನು ಸುರಿಸಿ ಹಾರ ಹಾಕಿ ಗೌರವಿಸಿದ್ದಾರೆ. ಬಳಿಕ ಮದುವೆ ಊಟ ಮಾಡಿದ್ದಾರೆ. ಎಲ್ಲರೂ ಮದುವೆಯ ಕಾರ್ಯಗಳು ಎದುರು ನೋಡುತ್ತಿದ್ದಂತೆ ವಾತಾವರಣವು ಉತ್ಸಾಹದಿಂದ ತುಂಬಿತ್ತು.
ವರನು ತನ್ನ ಸ್ನೇಹಿತರೊಂದಿಗೆ ವೇದಿಕೆಯ ಮೇಲೆ ಕುಳಿತಾಗ, ವಧು ನಗುತ್ತಾ ಹತ್ತಿರ ಬಂದಳು. ಆದರೆ, ವರನನ್ನು ನೋಡಿದ ನಂತರ ಅವಳು ಕಿರುಚುತ್ತಾ, ತನಗೆ ಪರಿಚಯಿಸಲಾದ ವ್ಯಕ್ತಿಯಲ್ಲ ಇತ. ನಾನು ನೋಡಿದ್ದೆ ಬೇರೆ ಹುಡುಗನ್ನು ಆದರೆ, ಇಲ್ಲಿಗೆ ಬಂದಿರುವ ಬೇರೆ ಎಂದು ಹಸೆಮಣೆ ಬಿಟ್ಟು ಓಡಿದ್ದಾಳೆ. ಅಲ್ಲದೆ, ಅವಳನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ, ವಧು ತನ್ನ ನಿರಾಕರಣೆಯಲ್ಲಿ ದೃಢವಾಗಿ ಉಳಿದ ಕಾರಣ ಮದುವೆ ರದ್ದುಗೊಂಡಿದೆ.
ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು ಉದ್ವಿಗ್ನತೆ ಹೆಚ್ಚಾಯಿತು. ವಧುವಿನ ಕುಟುಂಬವು ವರ ಸೇರಿದಂತೆ ವರನ ಕುಟುಂಬದ ಹಲವಾರು ಸದಸ್ಯರನ್ನು ಮನೆಯಲ್ಲಿಯೇ ಬಂಧನ ಮಾಡಿದ್ದಾರೆ. ಗಂಟೆಗಳ ಕಾಲ ಮಾತುಕತೆ ನಡೆಸಿದ ನಂತರವೂ ಸಂಘರ್ಷ ಬಗೆಹರಿಯಲಿಲ್ಲ. ಅಂತಿಮವಾಗಿ ಪೊಲೀಸರು ಮಧ್ಯಪ್ರವೇಶ ಮಾಡಿ ಬಂಧನದಲ್ಲಿದ್ದವರನ್ನು ಬಿಡಿಸಿ ಸಮಾಪ್ತಿಗೊಳಿಸಿದ್ದಾರೆ.(ಏಜೆನ್ಸೀಸ್)