ಪರೀಕ್ಷಾ ಕೇಂದ್ರದಲ್ಲಿ ಮಂಗಳಸೂತ್ರ, ಜನಿವಾರ ನಿಷೇಧವನ್ನು ಕೇಂದ್ರ ಹಿಂಪಡೆಯಲಿ: DK ಶಿವಕುಮಾರ್ ಆಗ್ರಹ

blank

ಈ ಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು. ಇದೇ ಅವರ ಮುಖವಾಡ. ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಯಬೇಕು ಎಂದು ಹೇಳಿರುವುದು ಸರಿಯಲ್ಲ. ಇದನ್ನು ಹಿಂಪಡೆಯಬೇಕು ಎಂದು ಡಿಸಿಎಂ DK ಶಿವಕುಮಾರ್​ ಆಗ್ರಹಿಸಿದರು.

ಇದನ್ನೂ ಓದಿ:ಮತ್ತೆ ಪ್ರವಾಸಿಗರಲ್ಲಿ ವಿಶ್ವಾಸ ಮೂಡಿಸಿದ ಪಹಲ್ಗಾಮ್: 5 ದಿನಗಳ ನಂತರ ಪುನ: ಚೇತರಿಸಿಕೊಂಡ “ಲಿಟಲ್ ಸ್ವಿಟ್ಜರ್ಲೆಂಡ್”..Pahalgam

ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. “ಧಾರ್ಮಿಕ ಸಂಕೇತಗಳಾಗಿ ಕಿವಿಯಲ್ಲಿ ಓಲೆ, ಮೂಗೂತಿ, ಮಂಗಳಸೂತ್ರ, ಜನಿವಾರ, ಉಡುದಾರ, ಹಣೆಬೊಟ್ಟು ಇರುತ್ತದೆ. ಇವುಗಳನ್ನು ಪರಿಶೀಲನೆ ಮಾಡಲಿ. ಆದರೆ ಅದನ್ನು ತೆಗೆಸುವುದು ಸರಿಯಲ್ಲ. ಈ ಹಿಂದೆ ಸಣ್ಣ, ಸಣ್ಣ ಉಪಕರಣಗಳನ್ನು ಬಳಸಿ ಪರೀಕ್ಷಾ ಅಕ್ರಮ ಎಸೆದ ಉದಾಹರಣೆಗಳನ್ನು ನೋಡಿದ್ದೇವೆ. ಇದರ ವಿರುದ್ಧ ಜನರೇ ಆಕ್ರೋಶ ವ್ಯಕ್ತಪಡಿಸಬೇಕು” ಎಂದರು.

ಬೆಲೆ ಏರಿಕೆಗೆ ಕೇಂದ್ರವೇ ಕಾರಣ

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನಜಾಗೃತಿ ಮೂಡಿಸಿ ಹಾಗೂ ಸಂವಿಧಾನ ರಕ್ಷಣೆಗೆ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ನಾನು, ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಭಾಗವಹಿಸುತ್ತಿದ್ದೇವೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಹೋರಾಟ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ:3267 ದಿನಗಳ ಬಳಿಕ ಅರ್ಧ ಶತಕ: ಈ ಅದ್ಭುತ ಆಟಕ್ಕೆ ಕಾರಣ ಯಾರು ಅಂತ ಹೇಳಿದ ಕೃನಾಲ್​ ಪಾಂಡ್ಯ! Krunal Pandya

“ಬಿಜೆಪಿಯವರು ಕೇಂದ್ರದಲ್ಲಿ ಇರುವ ಅವರದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಬೇಕು. ಏಕೆಂದರೆ ಅವರಿಂದಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು. ನಾವು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ” ಎಂದು ಹೇಳಿದರು.

 

Pahalgam Terror Attack; 16 ಯೂಟ್ಯೂಬ್ ಚಾನೆಲ್​ಗಳು​ ನಿಷೇಧ ಮಾಡಿದ ಕೇಂದ್ರ: ಕಾರಣ ಹೀಗಿದೆ..​

ಮತ್ತೆ ಪ್ರವಾಸಿಗರಲ್ಲಿ ವಿಶ್ವಾಸ ಮೂಡಿಸಿದ ಪಹಲ್ಗಾಮ್: 5 ದಿನಗಳ ನಂತರ ಪುನ: ಚೇತರಿಸಿಕೊಂಡ “ಲಿಟಲ್ ಸ್ವಿಟ್ಜರ್ಲೆಂಡ್”..Pahalgam

Share This Article

ನೀವು ತಪ್ಪದೇ ಈ ಆಹಾರಗಳನ್ನು ತಿನ್ನಲೇಬೇಕು… ಇವು ಕೆಟ್ಟ ಕೊಲೆಸ್ಟ್ರಾಲ್‌ನ ಶತ್ರುಗಳು! Cholesterol

Cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ…

ದಾಲ್ಚಿನ್ನಿ ಸೇವನೆ ಪುರುಷರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಯಾಕೆ ಗೊತ್ತಾ? | Cinnamon

Cinnamon: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ಭಾರತೀಯರ ಮನೆಗಳಲ್ಲಿ ಹೆಚ್ಚಾಗಿ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ. ಇದು…

ಬೀದಿ ಬದಿ ಅಂಗಡಿಗಳಿಂದ ಜ್ಯೂಸ್​ ಖರೀದಿಸಿ ಕುಡಿಯುವಾಗ ಎಚ್ಚರ… ಈ ಜ್ಯೂಸ್ ಅತ್ಯಂತ ಅಪಾಯಕಾರಿ! Soft Drinks

Soft Drinks : ದೇಶಾದ್ಯಂತ ಬೇಸಿಗೆಯ ಬಿಸಿ ಸುಡುತ್ತಿದೆ. ಸೂರ್ಯ ಶಾಖದಿಂದ ಬಳಲಿ ಬೆಂಡಾದ ಜನರು…