

ಮೈಸೂರು: ಕಳೆದ ಏಳೆಂಟು ವರ್ಷಗಳಿಂದ ರಾಜ್ಯ ಸರ್ಕಾರ ಪುಸ್ತಕ ಖರೀದಿಗೆ ಅನುದಾನ ಬಿಡುಗಡೆ ವಾಡದೇ ಇರುವುದರೊಂದಿಗೆ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದು, ಪುಸ್ತಕೋದ್ಯಮ ಚಿಂತಾಜನಕ ಸ್ಥಿತಿಂುಲ್ಲಿದೆ ಎಂದು ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದರು.
ನಗರದ ರಂಗಾಂುಣ ಆವರಣದ ವನರಂಗದಲ್ಲಿ ಸೃಷ್ಟಿ ಪಬ್ಲಿಕೇಷನ್, ಹಸಿರು ಆರ್ಗ್ಯಾನಿಕ್ಸ್, ಮೈಸೂರು ರಂಗಾಂುಣದ ಸಹಂೋಗದಲ್ಲಿ ಶನಿವಾರ ನಡೆದ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಅನುವಾದಿಸಿರುವ ್ರೆಂಚ್ ಕಾದಂಬರಿಕಾರ ಎಮಿಲ್ ಜೋಲಾ ಅವರ ‘ದಿ ಹರ್ತ್’ ಕೃತಿಯ ಅನುವಾದ ಭೂಮಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೂರೆಂಟು ಹಗರಣಗಳಲ್ಲಿ ಮುಳಗಿರುವ ಸರ್ಕಾರಕ್ಕೆ ಪುಸ್ತಕೋದ್ಯಮದ ಅಭಿವೃದ್ದಿಗೆ ವಾರ್ಷಿಕವಾವಿ 20 ಕೋಟಿ ರೂ. ವರೆಗೆ ಅನುದಾನ ಮೀಸಲಿಡಬೇಕು ಎಂದು ಸಲಹೆ ನೀಡಿದರು. ಇದರೊಂದಿಗೆ ಸಾಕಷ್ಟು ಸ್ಥಳೀಂು ಸಂಸ್ಥೆಗಳಿಂದ ಗ್ರಂಥಾಲಂು ತೆರಿಗೆಂೆುೀ 500 ರಿಂದ 600 ಕೋಟಿ ರೂ.ವರೆಗೆ ಇದ್ದು, ಅದರಲ್ಲಿ ಶೇ. 50 ರಷ್ಟನ್ನು ಸರ್ಕಾರ ವಸೂಲಿ ವಾಡುವ ಮೂಲಕ ಪ್ರಕಾಶಕರಿಗೆ ನೆರವಾಗಬೇಕು ಎಂದು ಮನವಿ ವಾಡಿದರು.