ಮರದಲ್ಲಿ ನೇತಾಡುತ್ತಿತ್ತು 16 ವರ್ಷದ ಬಾಲಕಿ ದೇಹ; ಬೆಚ್ಚಿ ಬೀಳಿಸುತ್ತೆ ಈ ಹೈ ಸ್ಕೂಲ್​ ಲವ್​ ಸ್ಟೋರಿ

hang
Published on

ಸಂಭಾಲ್​: ಹೈ ಸ್ಕೂಲ್​ ವಿದ್ಯಾಭ್ಯಾಸದಲ್ಲಿರುವ ಮಕ್ಕಳಿಗೆ ಯಾವುದು ಮುಖ್ಯ? ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಡಿಪಾಯವಾಗಬೇಕಾಗಿರುವ ಈ ವಯಸ್ಸಿನಲ್ಲಿ ವಿದ್ಯಾಭ್ಯಾಸದತ್ತ ಮತ್ತು ತಮ್ಮ ಪ್ರತಿಭೆಗಳತ್ತ ಹೆಚ್ಚು ಗಮನ ಹರಿಸಬೇಕು ಎನ್ನುತ್ತಾರೆ ಹಿರಿಯರು. ಆದರೆ ಕೆಲವು ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಪ್ರೀತಿ ಪ್ರೇಮದ ಸುಳಿಗೆ ಸಿಕ್ಕು, ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಅಂತದ್ದೇ ಒಂದು ಸ್ಟೋರಿ ಉತ್ತರ ಪ್ರದೇಶದಲ್ಲಿ ನಡೆದಿದೆ.

10ನೇ ತರಗತಿಯ ಬಾಲಕನೊಬ್ಬನನ್ನು 9ನೇ ತರಗತಿಯ ಬಾಲಕಿ ಪ್ರೀತಿಸುತ್ತಿದ್ದಳು. ಈ ಪ್ರೀತಿ ವಿಚಾರ ಎರಡೂ ಕುಟುಂಬಗಳಿಗೆ ಗೊತ್ತಾಗಿದೆ. ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯತಿ ಮಾಡಿ ಇಬ್ಬರಿಗೂ ಬುದ್ಧಿ ಹೇಳಿದ್ದಾರೆ. ನಿಮ್ಮದು ಪ್ರೀತಿಸುವ ವಯಸ್ಸಲ್ಲ ಎಂದು ತಿಳಿಹೇಳಲಾಗಿದೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಬಾಲಕ, ತನ್ನನ್ನು ಮದುವೆಯಾಗು ಎಂದು ಬಾಲಕಿಯನ್ನು ಪೀಡಿಸಿದ್ದಾನೆ.

ಅದೇ ಹುಚ್ಚು ಪ್ರೀತಿಯನ್ನು ನಂಬಿದ ಬಾಲಕಿ, ತನ್ನ ಪ್ರಿಯತಮನೊಂದಿಗೆ ಮನೆ ಬಿಟ್ಟು ಬಂದಿದ್ದಾಳೆ. ಬುಧವಾರ ಮನೆ ಬಿಟ್ಟು ಬಂದ ಬಾಲಕಿ, ಗುರುವಾರ ರಾತ್ರಿ ಹತ್ತಿರದ ಕಾಡಿನ ಮರವೊಂದರಲ್ಲಿ ಶವವಾಗಿ ನೇತಾಡುವಂತಾಗಿದೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ರೀತಿಯಲ್ಲಿ ಕಂಡುಬಂದಿದೆ. ಇಬ್ಬರೂ ಪ್ರೇಮಿಗಳು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಅದರೆ ಬಾಲಕನ ಕೊರಳಿಗೆ ಬಿಗಿದಿದ್ದ ಹಗ್ಗ ಲಡ್ಡಾಗಿದ್ದಿದ್ದರಿಂದ ಆತ ಸಾವನ್ನಪ್ಪಿಲ್ಲ, ಬಾಲಕಿ ಮಾತ್ರ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ. ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net