

ಕೆ.ಆರ್.ಸಾಗರ: ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕ್‌ರ್ ಅವರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕ್‌ರ್ ಅವರ ಭಾವಚಿತ್ರಕ್ಕೆ ವಿವಿಧ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು.
ಕಾ.ನೀ.ನಿಗಮ ಕೆ.ಆರ್.ಸಾಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಂತ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಷ್ಪಾರ್ಚನೆ ಮಾಡಿ, ಮಾತನಾಡಿ ಅಂಬೇಡ್ಕರ್ ತತ್ವ ಸಿದ್ಧಾಂತಗಳು ಅವರು ರಚಿಸಿದ ಸಂವಿಧಾನಗಳು ಜಾತ್ಯತೀತವಾಗಿದೆ. ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧರಾಗಿರಬೇಕು ಎಂದರು.
ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಶ್ಮಿ, ಲೆಕ್ಕ ಅಧೀಕ್ಷಕ ಶ್ರೀನಿವಾಸ್, ಸಹಾಯಕ ಇಂಜಿನಿಯರ್ ಅಭಿಲಾಷ್, ಆಕಿಬ್ ಜಾವಿದ್, ಲೆಕ್ಕ ಸಹಾಯಕರಾದ ನಾಗೇಶ್, ಯೋಗಾವತಿ, ಸಿಬ್ಬಂದಿ ಶಿವಕುಮಾರ್, ಜಯಪ್ರಕಾಶ್, ಮ್ಯಾಥ್ಯು, ಕೆೆಂಪ, ಚಂದ್ರು, ಬಸವರಾಜು ಇದ್ದರು. ಕೆ.ಆರ್.ಸಾಗರ ವಿವಿಧ ಸರ್ಕಾರಿ ಕಚೇರಿಗಳು ಸೇರಿದಂತೆ ಪೋಲಿಸ್ ಠಾಣೆ, ಶಾಲಾ-ಕಾಲೇಜು ಸೇರಿದಂತೆ ವಿವಿಧ ಕಡೆ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.