

ಲಾಸ್ ಏಂಜಲೀಸ್: ( man marry 5 wives have 11 children ) ಒಬ್ಬ ವ್ಯಕ್ತಿಗೆ ಗೆಳತಿ ಇದ್ದರೂ ಸಹ ಇತರರೊಂದಿಗೆ ಸಂಬಂಧ ಹೊಂದುವ ಕೆಟ್ಟ ಅಭ್ಯಾಸವಿರುತ್ತದೆ. ತನ್ನನ್ನು ತಾನು ಸುಧಾರಿಸಿಕೊಳ್ಳುವ ಉದ್ದೇಶದಿಂದ, ಅವನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಳ್ಳುವ ಅಗತ್ಯವನ್ನು ತಪ್ಪಿಸಲು ಅವನು ಐದು ಮಹಿಳೆಯರನ್ನು ಮದುವೆಯಾಗಿದ್ದಾನೆ. ವಿಚಿತ್ರ ಎಂದು ನಿಮಗೆ ಎನಿಸಿದರು ಇದು ಸತ್ಯ.
ಲಾಸ್ ಏಂಜಲೀಸ್ ನಿವಾಸಿ ಜೇಮ್ಸ್ ಬ್ಯಾರೆಟ್ ತನ್ನ ಗೆಳತಿಗೆ ಮೋಸ ಮಾಡಿದನು. ಅವನಿಗೆ ಬೇರೆ ಮಹಿಳೆಯರೊಂದಿಗೆ ಸಂಬಂಧವಿತ್ತು. ತನ್ನನ್ನು ತಾನು ಬದಲಾಯಿಸಿಕೊಳ್ಳಲು, ಅವನು ಏಕಪತ್ನಿತ್ವವನ್ನು ತ್ಯಜಿಸಿ ಬಹುಪತ್ನಿತ್ವವನ್ನು ಸ್ವೀಕರಿಸಿದನು. ಅಂದರೆ ಈಗ ಅವನು ಒಂದೇ ಬಾರಿಗೆ ಹಲವಾರು ಮಹಿಳೆಯರನ್ನು ಪ್ರೀತಿಸುತ್ತಿದ್ದಾನೆ. ಅವರಲ್ಲಿ ಒಬ್ಬರಿಗೆ ತಿಳಿಯದೆ ಮತ್ತೊಬ್ಬರೊಂದಿಗೆ ಸಂಬಂಧವಿತ್ತು. ಇನ್ನು ಮುಂದೆ ಯಾರನ್ನೂ ಮೋಸಗೊಳಿಸಬಾರದು ಎಂದು ಒಟ್ಟಿಗೆ ಮದುವೆಯಾದನು.
ಜೇಮ್ಸ್ ಹೇಳುವಂತೆ, ತಾನು ಒಬ್ಬಳೇ ಗೆಳತಿಯೊಂದಿಗೆ ಇದ್ದಾಗ, ತನ್ನೊಳಗೆ ನಿರಂತರವಾಗಿ ಸಂಘರ್ಷಕ್ಕೊಳಗಾಗುತ್ತಿದ್ದೆ ಮತ್ತು ತಾನು ತನ್ನೊಂದಿಗೆ ಪ್ರಾಮಾಣಿಕವಾಗಿಲ್ಲ ಎಂದು ಭಾವಿಸುತ್ತಿದ್ದೆ. ಆದರೆ ಈಗ ಈ ಐವರ ಜತೆ ಮದುವೆಯಾಗಿದ್ದೇನೆ ಇದು ನನ್ನ ಪತ್ನಿಯರಿಗೂ ಗೊತ್ತು. ನನಗೆ 11 ಮಕ್ಕಳು ಇದ್ದಾರೆ. ಐದು ಜನ ಪತ್ನಿಯರೊಂದಿಗೆ ಸಂತೋಷವಾಗಿದ್ದರೂ, ಇಷ್ಟು ದೊಡ್ಡ ಕುಟುಂಬವನ್ನು ಆರ್ಥಿಕವಾಗಿ ನಿರ್ವಹಿಸುವುದು ತನಗೆ ದೊಡ್ಡ ಸವಾಲಾಗಿದೆ. ಇಡೀ ಕುಟುಂಬವು ಒಟ್ಟಿಗೆ ವಾಸಿಸುತ್ತದೆ, ಪರಸ್ಪರ ಬೆಂಬಲಿಸುತ್ತಾರೆ ಎಂದಿದ್ದಾನೆ.