ಪ್ರಯಾಣ ದರ ನೀಡಿಲ್ಲ ಎಂಬ ಕಾರಣಕ್ಕೆ ಯುವಕನನ್ನು ಥಳಿಸಿದ ಆಟೋ ಡ್ರೈವರ್​! ವಿಡಿಯೋ ವೈರಲ್ ​|Auto driver

untitled-design-2025-08-25t135059967-68ac1d016a6a7
Published on

Auto driver : ಆಟೋದಲ್ಲಿ ಚಲಿಸಿದಕ್ಕೆ ಪ್ರಯಾಣ ದರ ನೀಡಿಲ್ಲ ಎಂಬ ಕಾರಣಕ್ಕೆ ಆಟೋರಿಕ್ಷಾದ ಚಾಲಕನೊಬ್ಬ ಯುವಕನೊಬ್ಬನನ್ನು ರಸ್ತೆಯಲ್ಲಿ ಮನಬಂದಂತೆ ಥಳಿಸಿರುವ ಆಘಾತಕಾರಿ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋದಲ್ಲೇನಿದೆ?

ಆಟೋರಿಕ್ಷಾದ ಚಾಲಕ ಯುವಕನೊಬ್ಬನ ಜೊತೆ ಪ್ರಯಾಣದರ ಸಂಬಂಧಿಸಿದ ವಿವಾದವೊಂದರಲ್ಲಿ ಮುಖಾಮುಖಿಯಾಗಿದ್ದಾರೆ. ಹಾಗೇ, ಚಾಲಕ ಯುವಕನ ಕಾಲರ್​ ಹಿಡಿದು ಅವನ ಮುಖಕ್ಕೆ ಹೊಡೆದು ಜೋರಾಗಿ ಕೂಗುತ್ತಿದ್ದಾನೆ. ಇನ್ನು ಯುವಕನು ಚಾಲಕನಿಗೆ ಕ್ಷಮೆಯಾಚಿಸಲು ಹೋಗಿದ್ದರೂ ಕೂಡ ಆತನ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಲೇ ಇರುವುದನ್ನು ಈ ವಿಡಿಯೋ ತೋರಿಸುತ್ತಿದೆ.

ಪ್ರತ್ಯಕ್ಷದರ್ಶಿಗಳು ಮೌನವಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿದ್ದು, ವಾಹನ ದಟ್ಟನೆ ಹಾಗೂ ಪಾದಚಾರಿಗಳು ಓಡಾಡುತ್ತಿರುವಂತಹ ಪ್ರದೇಶದಲ್ಲಿ ಘಟನೆ ನಡೆದಿದ್ದರೂ, ಯಾರೂ ಹಲ್ಲೆಯನ್ನು ತಡೆಯಲು ಮುಂದಾಗಿಲ್ಲ. ಹಾಗೆಯೇ ಗಲಾಟೆ ನಡೆಯುವಾಗ ಆಟೋದಲ್ಲಿ ಕುಳಿತಿದ್ದ ವ್ಯಕ್ತಿ ಮಧ್ಯಪ್ರವೇಶಿಸಲು ಯಾವುದೇ ಪ್ರಯತ್ನ ಮಾಡದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸರ ಪ್ರತಿಕ್ರಿಯೆ

ವೈರಲ್​ ಆದ ವಿಡಿಯೋವನ್ನು ಗಮನಿಸಿದ ಮುಂಬೈ ಪೊಲೀಸರು ತಮ್ಮ ಅಧಿಕೃತ ಖಾತೆಯಲ್ಲಿ ವಿಡಿಯೋವನ್ನು ಒಪ್ಪಿಕೊಂಡಿದ್ದು, "ದಯವಿಟ್ಟು ನಿಖರವಾದ ಸ್ಥಳವನ್ನು ಹಂಚಿಕೊಳ್ಳಿ" ಎಂದು ಪೊಲೀಸರು ಟ್ವೀಟ್​ ಮಾಡಿದ್ದಾರೆ. ಇನ್ನು ಆರೋಪಿ ಚಾಲಕನನ್ನು ಪತ್ತೆಗೆ ಬಲೆಬಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net