೨೦೦೮ರಲ್ಲಿ ನಾನು ಹುನಗುಂದ ಕ್ಷೇತ್ರದಲ್ಲಿ ಕಾಶಪ್ಪನವರ ಪರವಾಗಿ ಕೆಲಸ ಮಾಡಿಲ್ಲ ಎನ್ನುವುದು ಸತ್ಯ. ಅದನ್ನು ನಾನೇ ಪುಸ್ತಕದಲ್ಲಿ ಬರೆದಿದ್ದೇನೆ. ಕಾರಣ ೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಆದಾಗ ನನ್ನ ಕ್ಷೇತ್ರದ ಅನೇಕ ಗ್ರಾಮಗಳು ಹುನಗುಂದ ಕ್ಷೇತ್ರಕ್ಕೆ ಸರ‍್ಪಡೆ ಆಗಿದ್ದವು. ಹೀಗಾಗಿ ನಾನು ಹುನಗುಂದ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಆದರೆ, ಆಗ ವಿಜಯಾನಂದ ಕಾಶಪ್ಪನವರ ಅವರು ನಮ್ಮ ಮುಖಂಡರ ಎದುರು ಹುನಗುಂದ ಕ್ಷೇತ್ರಕ್ಕೆ ನಂಜಯ್ಯನಮಠ ಅವರಿಗೆ ಏನು ಸಂಬAಧ? ಅವರು ಯಾರು? ಎಂದು ನನ್ನ ಪ್ರಶ್ನಿಸಿ, ನನ್ನ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದರು. ಹುನಗುಂದ ಕ್ಷೇತ್ರದಲ್ಲಿ ನನ್ನ ತಂದೆ ನಾಲ್ಕು ಸಲ ಸ್ಪರ್ಧೆ ಮಾಡಿದ್ದರು. ಅಲ್ಲಿಂದಲೇ ಶಾಸಕರಾಗಿದ್ದರು. ನಾನು ೧ ರಿಂದ ೮ನೇ ತರಗತಿ ಅಲ್ಲಿಯೇ ಓದಿದ್ದೇನೆ. ಇದಕ್ಕಿಂತ ನನಗೆ ಹುನಗುಂದ ಸಂಬAಧ ಬೇಕಾ? ಕಾಶಪ್ಪನವರ ಮಾತಿನಿಂದ ಬೇಸರವಾಗಿ ೨೦೦೮ರ ಚುನಾವಣೆಯಲ್ಲಿ ಹೋಗಿರಲಿಲ್ಲ. ಆದರೆ, ೨೦೧೩, ೨೦೧೮, ೨೦೨೩ರ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಬೇಕಿದ್ದರೆ ಇದನ್ನು ಯಾವ ದೇವರ ಮುಂದೆಯಾದರೂ ಪ್ರಮಾಣ ಮಾಡಲು ನಾನು ಸಿದ್ಧ ಎಂದರು.