

ಬೆಂಗಳೂರು: ನವರಾತ್ರಿಯ ಅಂಗವಾಗಿ ನೃತ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಮಾಡಿದ್ದಂತಹ ನೃತ್ಯ ನೆರೆದಿದ್ದವರ ಕಣ್ಮನ ಸೆಳೆಯಿತು.
ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್‌ನ ಸಂಸ್ಥಾಪಕಿ
ಡಾ.ಅಂಬಿಕಾ ಸಿ ಅವರು, ನಗರದ ನಯನ ಸಭಾಂಗಣದಲ್ಲಿ ನವರಾತ್ರಿ ನೃತ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸೃಷ್ಟಿ ಸಮೂಹ ಸಂಸ್ಥೆಯ ಸಂಸ್ಥಾಪಕಿ ಕಮಲಾ ಚಂದ್ರಶೇಖರ್, ಹಿರಿಯ ನೃತ್ಯ ಶಿಕ್ಷಕಿಯರಾದ ವಿದ್ಯಾ, ಸುಬ್ಬಲಕ್ಷ್ಮಿ ಮತ್ತು ನೀತ ಉಪಸ್ಥಿತರಿದ್ದರು.
ಐವತ್ತಕ್ಕೂ ಹೆಚ್ಚು ಭರತನಾಟ್ಯ,ದೇವಿ ಕಾಳಿ, ದುರ್ಗಾ, ನವ ದುರ್ಗಾ, ವೇಷಧಾರಿಗಳಾದ ಮಹಿಳೆಯರು ಮತ್ತು ಮಕ್ಕಳು ನೃತ್ಯ ಮಾಡುವುದರ ಮೂಲಕ ದೇವಿ ಉಪಾಸನೆ ಮಾಡಿ ಸಂತೋಷದಿಂದ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದ ಪಾಲಕರು ಆನಂದದಿಂದ ಕಣ್ತುಂಬಿಕೊಂಡರು.