

ಶಿವಮೊಗ್ಗ: ನೆಲ, ಜಲ, ಗಿಡ, ಮರ, ಗಾಳಿ, ಬೆಳಕು, ಶಬ್ದ, ನದಿ ದಂಡೆ ಹಾಗೂ ಖಾಲಿ ಜಾಗ ಇವುಗಳನ್ನು ಒಟ್ಟಾರೆಯಾಗಿ ಪರಿಸರ ಎಂದು ಕರೆಯಲಾಗುತ್ತದೆ. ಪರಿಸರ ಶುದ್ಧವಾಗಿದ್ದಾಗ ನಮ್ಮ ಬದುಕು ಹಸನಾಗಿರುತ್ತದೆ ಎಂದು ನಿವೃತ್ತ ಡಿಡಿಪಿಐ ಎಂ.ಚಂದ್ರಶೇಖರಯ್ಯ ಹೇಳಿದರು.
ರೋಟರಿ ಪೂರ್ವ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಮಾನವನ ದುರಾಸೆಯಿಂದ ಸಂಪನ್ಮೂಲಗಳನ್ನು ಬೇಕಾಬಿಟ್ಟಿ ಬಳಕೆ ಮಾಡಲಾಗುತ್ತಿದೆ. ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ, ನೋಡುವ ಬೆಳಕು, ಕೇಳುವ ಶಬ್ಧ ಹಾಗೂ ವಾಸಿಸುವ ಮನೆಯ ಸುತ್ತಲಿನ ಪರಿಸರ ಮಲೀನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಡಿ.ಶಿಗ್ಗಾಂವ್, ಪ್ರೌಢ ಶಾಲಾ ಶಿಕ್ಷಕಿ ಬಿ.ಎಸ್.ಕಾವ್ಯ, ಖಜಾಂಚಿ ಜಿ.ವಿಜಯಕುಮಾರ್, ಪ್ರಾಚಾರ್ಯ ಆರ್.ಸೂರ್ಯನಾರಾಯಣ, ಮುಖ್ಯ ಶಿಕ್ಷಕಿ ಜಯಶೀಲಾಬಾಯಿ ಇದ್ದರು.