ಬೆರಗು ಮೂಡಿಸುವ ನೀಲಿ ಗ್ರಹ: ಇಲ್ಲಿ ಅಕ್ಷರಶಃ ಸುರಿಯುತ್ತೆ ವಜ್ರದ ಮಳೆ! | Neptune diamond rain

Wonder  Planet Neptune
ನೆಪ್ಚೂನ್ ಗ್ರಹದ ಅಚ್ಚರಿಯ ರಹಸ್ಯ
Published on: 
Summary

ನೆಪ್ಚೂನ್ ಗ್ರಹದ ವಾತಾವರಣದಲ್ಲಿ ಗಾಢ ನೀಲಿ ಬಣ್ಣದಲ್ಲಿ ಕಾಣಿಸುವು ಏಕೆ?

ಒತ್ತಡದ ಕಾರಣಕ್ಕೆ ನೆಪ್ಚೂನ್ ಗ್ರಹದ ಗರ್ಭದಲ್ಲಿ ಸುರಿಯುತ್ತದೆ ವಜ್ರದ ಮಳೆ

ಸೂರ್ಯನನ್ನು ಒಂದು ಬಾರಿ ಸುತ್ತಿ ಬರಲು ನೆಪ್ಚೂನ್‌ಗೆ ಎಷ್ಟು ವರ್ಷ ಬೇಕು?

Solar System: ಸೌರಮಂಡಲದ ಕೊನೆಯ ಗ್ರಹವಾದ ನೆಪ್ಚೂನ್ ಅಂದರೆ ವರುಣ ಗ್ರಹ.. ಸೂರ್ಯನಿಂದ ಅತ್ಯಂತ ದೂರದಲ್ಲಿದ್ದು, ತಂಪಾದ ಹಾಗೂ ರಹಸ್ಯಗಳಿಂದ ಕೂಡಿದ ಗ್ರಹವಾಗಿದೆ. ಅಷ್ಟಕ್ಕೂ ಈ ಗ್ರಹದ ವಾತಾವರಣ ಹೇಗಿದೆ ಮತ್ತು ಇಲ್ಲಿರುವ ರೋಚಕ ಸಂಗತಿಗಳು ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ

ನೆಪ್ಚೂನ್ (Neptune) ಗ್ರಹದ ವಾತಾವರಣದಲ್ಲಿ ಶೇಕಡಾ 80 ರಷ್ಟು ಜಲಜನಕ (Hydrogen), ಶೇಕಡಾ 19 ರಷ್ಟು ಹೀಲಿಯಂ ಹಾಗೂ ಅಲ್ಪ ಪ್ರಮಾಣದಲ್ಲಿ ಮೀಥೇನ್ ಅನಿಲಗಳಿವೆ. ಇಲ್ಲಿರುವ ಮೀಥೇನ್ ಅನಿಲವು ಸೂರ್ಯನ ಕೆಂಪು ಬೆಳಕನ್ನು ಹೀರಿಕೊಂಡು, ನೀಲಿ ಬೆಳಕನ್ನು ಪ್ರತಿಫಲಿಸುತ್ತದೆ.

ಹೀಗಾಗಿ, ಈ ಗ್ರಹವು ನಮಗೆ ಗಾಢ ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. ಸೂರ್ಯನಿಂದ ಅತಿಯಾದ ದೂರದಲ್ಲಿ ಇರುವುದರಿಂದ ಇಲ್ಲಿನ ಸರಾಸರಿ ತಾಪಮಾನ -214 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಅದಲ್ಲದೆ ಇನ್ನೂ ಕುತೂಹಲಕಾರಿ ಸಂಗತಿಗಳಿವೆ.

ವಜ್ರದ ಮಳೆ

ನೆಪ್ಚೂನ್‌ನ ಒಳಗಿನ ಪದರಗಳಲ್ಲಿ ತೀವ್ರವಾದ ಒತ್ತಡ ಮತ್ತು ತಾಪಮಾನವಿರುತ್ತದೆ. ಇದು ಮೀಥೇನ್‌ನಲ್ಲಿರುವ ಹೈಡ್ರೋಜನ್ ಮತ್ತು ಕಾರ್ಬನ್ ಬಂಧಗಳನ್ನು ಒಡೆಯುತ್ತದೆ. ಹೀಗೆ ಬೇರ್ಪಟ್ಟ ಕಾರ್ಬನ್ ಪರಮಾಣುಗಳು ತೀವ್ರ ಒತ್ತಡಕ್ಕೆ ಸಿಲುಕಿ ವಜ್ರಗಳಾಗಿ ಬದಲಾಗುತ್ತವೆ. ಇವು ಗ್ರಹದ ಗರ್ಭದೊಳಗೆ ಮಳೆಯಂತೆ ಸುರಿಯುತ್ತವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

Diamond Rain
ವಜ್ರದ ಮಳೆ ಸುರಿಸುವ ನೀಲಿ ಗ್ರಹ

ಅತ್ಯಂತ ವೇಗದ ಗಾಳಿ

ಸೌರಮಂಡಲದಲ್ಲೇ ಅತ್ಯಂತ ವೇಗವಾಗಿ ಗಾಳಿ ಬೀಸುವ ಗ್ರಹ ಇದಾಗಿದೆ. ಇಲ್ಲಿನ ಮಾರುತಗಳು ಗಂಟೆಗೆ 2,100 ಕಿಲೋಮೀಟರ್‌ಗಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಇದು ಧ್ವನಿಯ ವೇಗಕ್ಕಿಂತಲೂ ಹೆಚ್ಚಾಗಿದೆ.

165 ವರ್ಷಗಳ ಸುದೀರ್ಘ ವರ್ಷ

ನೆಪ್ಚೂನ್ ಸೂರ್ಯನನ್ನು ಒಂದು ಬಾರಿ ಸುತ್ತು ಹಾಕಲು ಭೂಮಿಯ ಲೆಕ್ಕಾಚಾರದಲ್ಲಿ ಬರೋಬ್ಬರಿ 165 ವರ್ಷಗಳನ್ನು ತೆಗೆದುಕೊಳ್ಳುತ್ತದೆ. 1846ರಲ್ಲಿ ಇದನ್ನು ಕಂಡುಹಿಡಿದ ನಂತರ, ಇದು ಈವರೆಗೆ ಕೇವಲ ಒಂದೇ ಒಂದು ವರ್ಷವನ್ನು ಪೂರ್ಣಗೊಳಿಸಿದೆ. ಆದರೆ, ಇದರ ಒಂದು ದಿನ ಕೇವಲ 16 ಗಂಟೆಗಳಷ್ಟೇ ಇರುತ್ತದೆ.

ಲೆಕ್ಕಾಚಾರದ ಮೂಲಕ ಸಿಕ್ಕ ಗ್ರಹ

ನೆಪ್ಚೂನ್ ಗ್ರಹವನ್ನು ದೂರದರ್ಶಕದ ಮೂಲಕ ನೇರವಾಗಿ ನೋಡಿ ಪತ್ತೆಹಚ್ಚುವ ಮುನ್ನ, ಯುರೇನಸ್ ಗ್ರಹದ ಪಥದಲ್ಲಾಗುತ್ತಿದ್ದ ಬದಲಾವಣೆಗಳನ್ನು ಗಮನಿಸಿ ಗಣಿತದ ಲೆಕ್ಕಾಚಾರಗಳ ಮೂಲಕವೇ ಇದರ ಅಸ್ತಿತ್ವವನ್ನು ಕಂಡುಹಿಡಿಯಲಾಯಿತು.

Moon in the opposite direction
ವಿರುದ್ಧ ದಿಕ್ಕಿನಲ್ಲಿ ಸುತ್ತುವ ಚಂದ್ರ

ಹಿಮ್ಮುಖವಾಗಿ ತಿರುಗುವ ಚಂದ್ರ

ನೆಪ್ಚೂನ್‌ಗೆ 14 ರಿಂದ 16 ತಿಳಿದಿರುವ ಚಂದ್ರರಿದ್ದಾರೆ (ಉಪಗ್ರಹಗಳು). ಇವುಗಳಲ್ಲಿ ದೊಡ್ಡದಾದ 'ಟ್ರೈಟಾನ್' ಎಂಬ ಚಂದ್ರನು ತನ್ನ ಗ್ರಹ ತಿರುಗುವ ದಿಕ್ಕಿಗೆ ವಿರುದ್ಧವಾಗಿ ಸುತ್ತುತ್ತಾನೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾದಲ್ಲಿ ಎಐ ಬಳಸಿದ್ದಾರಾ..! ನಿರ್ದೇಶಕ ನಿತೇಶ್ ತಿವಾರಿ ಹೇಳಿದ್ದೇನು? | Ramayana Movie

ಇನ್ನು, ವರುಣ ಗ್ರಹದಲ್ಕಾಲಿ ಲಿಡಲು ಜಾಗವೇ ಇಲ್ಲ ನೆಪ್ಚೂನ್ ಗ್ರಹಕ್ಕೆ ಗಟ್ಟಿಯಾದ ನೆಲವೇ ಇಲ್ಲದಿರುವುದರಿಂದ ಮನುಷ್ಯರು ಅಲ್ಲಿ ಕಾಲಿಡಲು ಸಾಧ್ಯವಿಲ್ಲ. ಇದು ಸಂಪೂರ್ಣವಾಗಿ ನೀರು, ಅಮೋನಿಯಾ ಮತ್ತು ಮೀಥೇನ್ ಮಿಶ್ರಿತ ದಟ್ಟವಾದ ದ್ರವದಿಂದ ಕೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net