

ಬೆಂಗಳೂರು: ಆರೋಗ್ಯ ಲೇಔಟ್‌ನಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಅನ್ನಪೂಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿ 1.36 ಕೋಟಿ ರೂ. ಮೌಲ್ಯದ 1 ಕೆಜಿ 700 ಗ್ರಾಂ ಆಭರಣ ಜಪ್ತಿ ಮಾಡಿದ್ದಾರೆ.
ಉತ್ತರ ಪ್ರದೇಶ ಮೂಲದ ರ್ಇಾನ್ ಇಸ್ಲಾಮುದ್ದೀನ್ (38) ಬಂಧಿತ. ಈತನ ಬಂಧನದಿಂದ 11 ಕನ್ನ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, 1 ಕೆಜಿ 700 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2023ರ ಆಗಸ್ಟ್‌ನಲ್ಲಿ ಆರೋಗ್ಯ ಲೇಔಟ್‌ನಲ್ಲಿನ ಮನೆಯೊಂದರ ಮಾಲೀಕ ಕುಟುಂಬ ಹೊರಗೆ ಹೋಗಿ ಸಂಜೆ ವಾಪಸ್ ಬಂದಿದ್ದರು. ಅಷ್ಟೊತ್ತಿಗೆ ಮನೆಗೆ ನುಗ್ಗಿ ರ್ಇಾನ್ ಚಿನ್ನಾಭರಣ ಕಳವು ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಅನ್ನಪೂಣೇಶ್ವರಿನಗರ ಪೊಲೀಸರು ಸ್ಥಳ ಮಹಜರ್ ನಡೆಸಿದಾಗ ಬೆರಳಚ್ಚು ಲಭ್ಯವಾಗಿತ್ತು.
ಇದರ ಆಧಾರದ ಮೇಲೆ ಆರೋಪಿಯ ಸುಳಿವು ಲಭ್ಯವಾಗಿ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಆದರೆ, ಆತನ ಪತ್ತೆಯಾಗದೆ ಇದ್ದಾಗ ವಾಪಸ್ ಬಂದಿದ್ದರು. ನವೆಂಬರ್ 9ರಂದು ಉತ್ತರ ಪ್ರದೇಶದ ಮುರಾದಾಬಾದ್ ಪೊಲೀಸರು ಆರೋಪಿ ರ್ಇಾನ್‌ನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಈ ಮಾಹಿತಿ ತಿಳಿದ ಪೊಲೀಸರು, ಉತ್ತರ ಪ್ರದೇಶಕ್ಕೆ ಹೋಗಿ ಬಾಡಿ ವಾರಂಟ್ ಪಡೆದು ಆರೋಪಿಯನ್ನು ಕರೆತಂದು ಕದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.