ಅವೈಜಾನಿಕ ನಿರ್ಧಾರವನ್ನು ಹಿಂಪಡೆಯಬೇಕು

Ksd_Protest
Published on


ಮೈಸೂರು: ಶಾಲಾ ನವೀಕರಣ ಕುರಿತಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಅವೈಜಾನಿಕ ನಿರ್ಧಾರವನ್ನು ಹಿಂಪಡೆಯಬೇಕು ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಮೈಸೂರು ವಿಭಾಗದ ಅಧ್ಯಕ್ಷ ಎನ್.ನಂಜುಂಡಸ್ವಾಮಿ ಒತ್ತಾಯಿಸಿದರು.
ಶಾಲಾ ನವೀಕರಣಕ್ಕೆ ಇದೀಗ 64 ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕೆಂದು ಇಲಾಖೆ ಸೂಚಿಸಿದೆ. ಆದರೆ ಇವುಗಳಲ್ಲಿ ಬಹಳಷ್ಟು ಅವೈಜ್ಞಾನಿಕವಾಗಿವೆ. ಈ ಹಿನ್ನೆಲೆಯಲ್ಲಿ ಈ ಕುರಿತು ನಿರ್ಧಾರ ವಾಪಸ್ ಪಡೆಯದಿದ್ದರೆ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಭೂ ಪರಿವರ್ತನೆ, ಆಸ್ತಿ ತೆರಿಗೆ ಮೊದಲಾದ ಸಮಸ್ಯೆ ತಂದೊಡ್ಡಲಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದ ಕಾರಣ ಆ.13ರಂದು ಮಂಗಳವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ. ಈ ವೇಳೆ ತಮ್ಮ ಒಕ್ಕೂಟದ ಬೇಡಿಕೆ ಈಡೇರಿಸಲು ಆ.21ರವರೆಗೆ ಗಡುವು ನೀಡಲಾಗುವುದು. ತಪ್ಪಿದಲ್ಲಿ ಆ.29 ರಂದು ಮತ್ತೆ ಒಕ್ಕೂಟ ಸಭೆ ನಡೆಸಿ ಬೆಂಗಳೂರು ಚಲೋದಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪದಾಧಿಕಾರಿಗಳಾದ ಉಮೇಶ್‌ಚಂದ್ರ, ಲಿಂಗರಾಜು, ಮಹೇಶ್‌ಕುಮಾರ್, ವಿಷ್ಣುವರ್ಧನ್, ರವಿಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net