ರಾಜ್ಯದ ವಿವಿಧ ನಿಗಮಗಳಿಗೆ ಅಧ್ಯಕ್ಷರ ನೇಮಕ; ಯಾರಿಗೆ ಯಾವ ನಿಗಮ?

ನಿಗಮ
Published on

ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಹೆಚ್ಚುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಹೊಸ ತಂತ್ರ ಹೂಡಿದ್ದಾರೆ. ರಾಜ್ಯದ ವಿವಿಧ ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ತಮ್ಮ ಮೇಲಿದ್ದ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಸಿಕೊಂಡಿದ್ದಾರೆ.

ವಿವಿಧ ನಿಗಮಗಳು ಮತ್ತು ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವವರ ಪಟ್ಟಿ ಇಂತಿದೆ

ಬಿ.ಎಸ್. ಪರಮಶಿವಯ್ಯ - ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ

ಎಸ್​.ಆರ್​.ವಿಶ್ವನಾಥ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಚಂದು ಪಾಟೀಲ್​ - ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿ

ಬಿ.ಸಿ.ನಾಗೇಶ್​ - ಕಾರ್ಮಿಕ ಕಲ್ಯಾಣ ಮಂಡಳಿ

ಬಿ.ಕೆ. ಮಂಜುನಾಥ್​​​ - ನಾರು ಅಭಿವೃದ್ಧಿ ಮಂಡಳಿ

ಸವಿತಾ ವಿಶ್ವನಾಥ್ ಅಮರ್ ಶೆಟ್ಟಿ - ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ

ಕಿರಣ್ ಕುಮಾರ್​ - ಜೈವಿಕ ಇಂಧನ ಅಭಿವೃದ್ಧಿ ಮಂಡಳಿ

ತಾರಾ ಅನುರಾಧ - ಅರಣ್ಯ ಅಭಿವೃದ್ಧಿ ‌ನಿಗಮ

ಎಸ್.ಆರ್.ಗೌಡ - ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ

ಕೆ.ವಿ. ನಾಗರಾಜ್​​ - ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ

ತಿಪ್ಪೇಸ್ವಾಮಿ - ಕಾಡಾ ನಿಗಮ

ರಘು ಆರ್​ - ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ

ಬಾಬು ಪತ್ತಾರ್​ - ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ

ಜೆ.ಕೆ ಗಿರೀಶ್​ ಉಪ್ಪಾರ್​ - ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ

ಎಸ್​ ನರೇಶ್​ ಕುಮಾರ್​ - ಸವಿತಾ ಸಮುದಾಯ ಅಭಿವೃದ್ಧಿ ನಿಗಮ

ತಮ್ಮೇಶ ಗೌಡ ಎಚ್​.ಸಿ - ಕರ್ನಾಟಕ ವಿದ್ಯುತ್​ ಕಾರ್ಖಾನೆ ನಿಯಮಿತ

ದುರ್ಯೋಧನ ಮಹಲಿಂಗಪ್ಪ - ಡಾ.ಬಿ.ಆರ್​.ಅಬೇಂಡ್ಕರ್​ ನಿಗಮ ನಿಯಮಿತ

ಎಚ್​. ಹನುಮಂತಪ್ಪ - ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

ಎಂ ರಾಮಚಂದ್ರ - ಕೇಂದ್ರ ಪರಿಹಾರ ಸಮಿತಿ

ಸಿ. ಮುನಿಕೃಷ್ಣ - ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ

ಸಿದ್ದನಗೌಡ ಈರ್ಶವರಗೌಡ ಚಿಕ್ಕನಗೌಡ್ರು - ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ

ಲಿಂಗರೆಡ್ಡಿ ಬಿ.ಎನ್​. ಗುರುಂಡಗೌಡ ಬಾಸರೆಟ್ಟಿ - ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ

ವಿಜುಗೌಡ ಎಸ್​ ಪಾಟೀಲ್​ - ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net