ಹಾರ್ದಿಕ್ ಪಟೇಲ್​ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ

Hardik patel joins congress
Published on

ಅಹಮದಾಬಾದ್​: ಪಾಟೀದಾರ್​ ಮೀಸಲು ಹೋರಾಟ ಸಮಿತಿ ಮುಖಂಡ ಹಾರ್ದಿಕ್​ ಪಟೇಲ್​ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಅಮಿತ್ ಚಾವ್ಡಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.

ಹಾರ್ದಿಕ್ ಪಟೇಲ್ ಕಳೆದ ವರ್ಷ ಲೋಕಸಭೆ ಚುನಾವಣೆಗೂ ಮೊದಲು ಮಾರ್ಚ್​ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಬಿಜೆಪಿ ಭದ್ರಕೋಟೆ ಗುಜರಾತ್​ನಲ್ಲಿ ಪಾಟೀದಾರ್ ಮೀಸಲಾತಿ ಚಳವಳಿ ಆರಂಭಿಸಿ ದೇಶದ ಗಮನಸೆಳೆದವರು ಹಾರ್ದಿಕ್ ಪಟೇಲ್​. ಗುಜರಾತ್​ನಲ್ಲಿ ನೆಲಕಚ್ಚಿರುವ ಕಾಂಗ್ರೆಸ್​ ಪಕ್ಷವನ್ನು ಬಡಿದೆಬ್ಬಿಸಬೇಕಾದ ಸವಾಲು ಕಾರ್ಯಾಧ್ಯಕ್ಷರಾಗಿ ನೇಮವಾಗಿರುವ ಪಟೇಲ್ ಎದುರಿಗಿದೆ.

2015ರಲ್ಲಿ ಭಾರಿ ಬಲಪಡೆದುಕೊಂಡಿದ್ದ ಚಳವಳಿ ಬಳಿಕ ರಾಜಕೀಯದ ಕಾರಣಕ್ಕೆ ಹಾದಿ ತಪ್ಪಿತು. ನಂತರದಲ್ಲಿ ಅದರ ಮುಂಚೂಣಿಯಲ್ಲಿದ್ದ ನಾಯಕರೆಲ್ಲ ವಿವಿಧ ರಾಜಕೀಯ ಪಕ್ಷ ಸೇರಿಕೊಂಡರು. ಹಾರ್ದಿಕ್​ ಕಾಂಗ್ರೆಸ್ ಸೇರಿಕೊಂಡು, ರಾಹುಲ್, ಸೋನಿಯಾ ಗುಣಗಾನ ಮಾಡಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಪ್ರಯತ್ನಿಸಿದ್ದರು. ಹಾದಿತಪ್ಪಿದ ಚಳವಳಿಯ ಸಂದರ್ಭದಲ್ಲಿ ಆದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಸಂಬಂಧಿಸಿ ಮತ್ತು ಇತರೆ ಕಾರಣಗಳಿಗೆ ಪಟೇಲ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net