

ಕೋಲಾರ: ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಎನ್ಡಿಎ ಪಕ್ಷಗಳು ಮೇಲುಗೈ ಸಾಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 17 ವಾರ್ಡ್ಗಳಿದ್ದು, ಆ.17ರಂದು ಮತದಾನ ನಡೆದಿತ್ತು. ಬುಧವಾರ ನಡೆದ ಮತ ಎಣಿಕೆಯಲ್ಲಿ ಲಿತಾಂಶ ಹೊರಬಂದಿದ್ದು, 17 ಸ್ಥಾನದ ಪೈಕಿ ಕಾಂಗ್ರೆಸ್ 6, ಜೆಡಿಎಸ್ 4, -ಬಿಜೆಪಿ 6 ಹಾಗೂ ಪಕ್ಷೇತರ ಒಬ್ಬರು ಜಯಗಳಿಸಿದ್ದು, ಎನ್ಡಿಎ ಕೂಟವು 10 ಸ್ಥಾನ ಗಳಿಸುವ ಮೂಲಕ ಅತಿ ದೊಡ್ಡ ಕೂಟವಾಗಿ ಹೊರಹೊಮ್ಮಿದೆ.
ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಎಡಿಸಿ ಮಂಗಳಾ ಮತ್ತು ಎಸ್ಪಿ ಬಿ.ನಿಖಿಲ್ ಅವರ ಮೇಲ್ವಿಚಾರಣೆಯಲ್ಲಿ ಲಿತಾಂಶ ಪ್ರಕ್ರಿಯೆ ನಡೆಯಿತು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 2019ರಲ್ಲಿ ವೇಮಗಲ್ ಗ್ರಾಮ ಪಂಚಾಯಿತಿ, ಕುರುಗಲ್ ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ 17 ವಾರ್ಡ್ಗಳನ್ನು ಒಳಗೊಂಡ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡಿದ ಮೈತ್ರಿಗೆ ಈಗ ಜನತೆ ಬಹುಪರಾಕ್ ಎಂದಿದ್ದಾರೆ.
* ಮೈತ್ರಿ ಮುಂದೆ ಮಣಿದ ಕೈ
ಚುನಾವಣೆಯನ್ನು ಕಾಂಗ್ರೆಸ್, ಜೆಡಿಎಸ್ ಹಾಗೂ -ಬಿಜೆಪಿ ಪ್ರತಿಷೆ್ಠೆಯಾಗಿ ತೆಗೆದುಕೊಂಡಿದ್ದರೂ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದ ಮುಖಂಡರು ಅಳೆದೂ ತೂಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ಆದರೆ ಕಾಂಗ್ರೆಸ್ ನಿರೀಸಿದ ಮಟ್ಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಲವಾಗಿದೆ. ಆದರೆ, ಮೈತ್ರಿಗೆ ನಿರೀೆಗೂ ಮೀರಿ ಸ್ಥಾನ ಲಭಿಸಿರುವುದು ರಾಜಕೀಯ ವಲಯದಲ್ಲಿ ಮತ್ತೊಂದು ದಿಕ್ಸೂಚಿಯ ಸಂದೇಶ ರವಾನಿಸಿದೆ.
* ಫಲಿಸದ ತಂತ್ರ
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದು ಗ್ಯಾರಂಟಿ ಯೋಜನೆಗಳು, ಕೈಗಾರಿಕೆ ಪ್ರದೇಶ ನಿರ್ಮಾಣ ಮಾಡಿರುವುದನ್ನು ಅಸ್ತ್ರವಾಗಿಸಿಕೊಂಡು ಕೈ ಪಡೆ ಪ್ರಚಾರ ಮಾಡಿತ್ತು. ಅಧಿಕಾರಕ್ಕೆ ಬಂದರೆ ಮಾದರಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಪ್ರಣಾಳಿಕೆ ಜನರ ಮುಂದಿಟ್ಟಿತ್ತು. ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಉಪ ಸಭಾಪತಿ ವಿ.ಆರ್.ಸುದರ್ಶನ್ ಸೇರಿ ಹಿರಿಯ ನಾಯಕರು ಕೈ ಅಭ್ಯರ್ಥಿಗಳ ಪರ ವ್ಯಾಪಕ ಪ್ರಚಾರ ನಡೆಸಿದ್ದರು. ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್ ಅಧಿವೇಶನಕ್ಕೂ ಹಾಜರಾಗದೆ ಚುನಾವಣೆ ಮುಗಿಯುವವರೆ ವೇಮಗಲ್ನಲ್ಲೇ ಬೀಡು ಬಿಟ್ಟಿದ್ದರು. ಆಡಳಿತ ಪಕ್ಷ ಎಂಬ ಅತಿಯಾದ ನಂಬಿಕೆಯಿಂದ ಮೈತ್ರಿ ಕೂಟಕ್ಕೆ ತಿರುಗೇಟು ನೀಡಲು ಮಾಡಿದ ತಂತ್ರಗಳು ಲಿಸಿಲ್ಲ ಎಂಬುದಕ್ಕೆ ಲಿತಾಂಶ ಸಾಯಾಗಿದೆ.
* ಮೈತ್ರಿ ಪ್ಲ್ಯಾನ್ ಸಕ್ಸಸ್
ಆಡಳಿತ ಪಕ್ಷಕ್ಕೆ ಸೆಡ್ಡು ಹೊಡೆದ ಮೈತ್ರಿ ಪಕ್ಷಗಳಿಂದ ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಕೆ.ಎಸ್.ಮಂಜುನಾಥ್ಗೌಡ, ವೈ.ಎ.ನಾರಾಯಣಸ್ವಾಮಿ, ನಂದೀಶ್ ರೆಡ್ಡಿ ಹೀಗೆ ಹಲವು ಮಂದಿ ಅಭ್ಯರ್ಥಿಗಳ ಪರ ಕೆಲಸ ಮಾಡಿದರು.
ಬಿಜೆಪಿ ಅವಧಿಯಲ್ಲಿ ಪಟ್ಟಣ ಪಂಚಾಯಿತಿ ರಚನೆ ಮಾಡಲಾಗಿದೆ ಎಂಬುದರ ಜತೆಗೆ ಕಾಂಗ್ರೆಸ್ ಸರ್ಕಾರದ ವೈಲ್ಯ ಮುಂದಿಟ್ಟುಕೊಂಡು ಪ್ರಚಾರ ನಡೆಸಿದ ಪ್ಲಾ$್ಯನ್ ವರ್ಕ್ಔಟ್ ಆಗಿದೆ.
* 12 ಪಕ್ಷೇತರರ ಸೋಲು...!
ಮೈತ್ರಿ ಆಧಾರದ ಮೇಲೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ಆಕಾಂಗಳು ಎಲ್ಲರಿಗೂ ಟಿಕೆಟ್ ಹಂಚಿಕೆ ಮಾಡಲಾಗಲಿಲ್ಲ. ಟಿಕೆಟ್ ವಂಚಿತ ಕೆಲವರನ್ನು ಕಾಂಗ್ರೆಸ್ ಮುಖಂಡರು ತಮ್ಮತ್ತ ಸೆಳೆದು ಕಣಕ್ಕೆ ಇಳಿಸಿದರು.
ಇದು ನಾಲ್ಕು ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳ ಗೆಲುವಿನ ಮೇಲೆ ಪರಿಣಾಮ ಬೀರಿದೆ ಎಂಬ ಮಾತು ಕೇಳಿ ಬಂದಿತು. ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ್ದ ಕಾರಣದಿಂದ ವೇಮಗಲ್ ಎ ಬ್ಲಾಕ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಶಿಲ್ಪಾ ಜಯಗಳಿಸಿದ್ದಾರೆ.