ಬಾಲಿವುಡ್‌ನಲ್ಲಿ ವೈಆರ್‌ಎಫ್(ಯಶ್ ರಾಜ್ ಫಿಲಂಸ್) ಸಂಸ್ಥೆಯು ಸ್ಪೈ ಯೂನಿವರ್ಸ್ ಮೂಲಕ ಹೆಚ್ಚು ಗಮನ ಸೆಳೆದಿದೆ. ಈಗಾಗಲೇ ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ಟೈಗರ್ 3’, ‘ವಾರ್’, ‘ವಾರ್ 2’, ‘ಪಠಾಣ್’ ಸಿನಿಮಾಗಳು ಮೂಡಿಬಂದಿವೆ. ಇದೀಗ ಈ ಸ್ಪೈ ಯೂನಿವರ್ಸ್‌ನ ಏಳನೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಅದೇ ‘ಆಲ್ಫಾ’. ಆಲಿಯಾ ಭಟ್, ಶಾರ್ವರಿ ವಾಘ್, ಬಾಬಿ ಡಿಯೋಲ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವು ಈಗಾಗಲೇ ಪೋಸ್ಟರ್ ಮೂಲಕ ಗಮನ ಸೆಳೆದಿತ್ತು. ಇದೇ ಜುಲೈ 3ಕ್ಕೆ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಆ್ಯಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ. ಅದರಲ್ಲಿ ಆಲಿಯಾ ಭಟ್ ಜಬರ್ದಸ್ತ್ ೈಟ್‌ಗಳ ಮೂಲಕ ರಕ್ತಸಿಕ್ತವಾಗಿ ಆ್ಯಕ್ಷನ್ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. 1.55 ನಿಮಿಷದ ಈ ಟೀಸರ್ ಆಲಿಯಾ ಮತ್ತು ಬಾಬಿ ಡಿಯೋಲ್ ಪಾತ್ರಗಳ ಸುತ್ತ ಸಾಗುತ್ತದೆ. 18 ವರ್ಷದ ಮಗಳ ಹುಟ್ಟುಹಬ್ಬಕ್ಕೆ ತಂದೆ (ಬಾಬಿ) ಉಡುಗೊರೆ ನೀಡುತ್ತಾನೆ. ಆ ಗ್‌ಟಿ ನೋಡಿಯೇ ಮಗಳು ಅಚ್ಚರಿಯಾಗುತ್ತಾಳೆ. ಇದೇನಿದು ಎಂಬ ಧ್ವನಿ ಬರುವ ಮುಂಚೆಯೇ ತಂದೆ, ‘ಇಷ್ಟು ದಿನಗಳ ಕಾಲ ನಿನಗೆ ಟ್ರೇನಿಂಗ್ ನೀಡಿದ್ದು ಇದಕ್ಕೇನಾ? ಎಂಬ ಪ್ರಶ್ನೆ ಬರುತ್ತದೆ. ಅಲ್ಲಿಂದಲೇ ಟೀಸರ್ ಮುಗಿಯುವವರೆಗೂ ಆಲಿಯಾ ಭರ್ಜರಿ ಫೈಟ್ ಮಾಡಿ, ಗೂಢಚಾರಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಟೀಸರ್‌ನಲ್ಲಿ ಶಾರ್ವರಿ ವಾಘ್ ಪಾತ್ರ ಪರಿಚಯಿಸಿಲ್ಲ. ಶಿವ ರಾವಲ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. -ಏಜೆನ್ಸೀಸ್